ಬಹಿರಂಗವಾಗಿಯೇ ಹಣ ಹಂಚುತ್ತಿರುವ ಎಂಟಿಬಿ

ಬಹಿರಂಗವಾಗಿಯೇ ಹಣ ಹಂಚುತ್ತಿರುವ ಎಂಟಿಬಿ

ಹೊಸಕೋಟೆ, ಡಿ. 02: ದಿನೇ ದಿನೆ ರಂಗೇರುತ್ತಿರು ಹೊಸಕೋಟೆ ಉಪ ಚುನಾವಣೆ ಕಣದಲ್ಲೀಗ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜು ಸ್ವತಃ ಹಣ ಹಂಚುತ್ತಿರುವ ದೃಷ್ಯಗಳು ವೈರಲ್ ಆಗಿ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ.ಎಂಟಿಬಿ ನಾಗರಾಜ್ ಬೆಂಬಲಿಗರು ನಡು ರಸ್ತೆಯಲ್ಲೇ ಮಹಿಳೆಯರು ಮತ್ತು ಪುರುಷರಿಗೆ ಹಣ ಹಂಚುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಚುನಾವಣಾ ಪ್ರಚಾರಕ್ಕೆ ತೆರಳಿದ ವೇಳೆ ಎಂಟಿಬಿ ನಾಗರಾಜ್ ಅವರೆ ಹೂವಿನ ಹಾರ ಹಾಕಿದ ವ್ಯಕ್ತಿಗೆ ಹಣ ನೀಡುತ್ತಿರುವ ದೃಷ್ಯವೂ ಸ್ಪಷ್ಟವಾಗಿ ಕಾಣಉತ್ತಿದೆ.

ಇಷ್ಟೆಲ್ಲ ಸಾಕ್ಷಗಳಿದ್ದರೂ ಚುನಾವಣಾಧಿಕಾರಿಗಳು ಕಣ್ಮುಚ್ಚಿ ಕೂತಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮತ್ತೊಂದೆಡೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಬೆಂಬಲಿಗರು ಎಂಟಿಬಿ ನಾಗರಾಜ್ ವಿರುದ್ಧ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಮಾಡಿ ಮಹಿಳೆಯರ ಮಂಗಳಾರತಿ ತಟ್ಟೆಗೆ 2 ಸಾವಿರ ನೋಟ್ ಹಾಕಿದ ಎಂಟಿಬಿ ನಾಗರಾಜ್ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್

ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಥೋಡ್ ಮಾತನಾಡಿ, ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜು ಮೆರವಣಿಗೆ ವೇಳೆ ಜನರಿಗೆ ಹಣ ಹಂಚಿಕೆ ಮಾಡುತ್ತಿರುವ ದೃಷ್ಯಾವಳಿಗಳನ್ನು ಬಿಡುಗಡೆ ಮಾಡಿದರು. ಎಂಟಿಬಿ ಸೋಲಿನ ಹತಾಷೆಯಿಂದ ಜನರನ್ನು ತಪ್ಪು ದಾರಿಗೆಳೆಯಲು ಹಣದ ಹೊಳೆ ಹರಿಸುತ್ತಿದ್ದಾರೆಂದು ತರಾಟೆಗೆ ತೆಗೆದುಕೊಂಡು ಮಾದ್ಯಮದವರ ಮುಂದೆ ನಾಗರಾಜರ ಹಣ ನೀಡುತ್ತಿರುವ ವಿಡಿಯೋ ಪ್ರದರ್ಶಿಸಿದರು.

ಎಂಟಿಬಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ ಅವರು ಪ್ರತಿ ಕ್ಷೇತ್ರದಲ್ಲೂ ಬಿಜೆಪಿ ಹಣದ ಹೊಳೆ ಹರಿಸಲಿದ್ದಾರೆಂದರು. ತೆರೆದ ವಾಹನದಲ್ಲಿ ಪ್ರಚಾರ ಮಾಡುತ್ತಿದ್ದ ಎಂಟಿಬಿ ಹಣ ಹಂಚುತ್ತಿರುವ ವಿಡಿಯೋವನ್ನು ರಾಥೋಡ್ ಬಿಡುಗಡೆ ಮಾಡಿದರು ಡಿಕೆ. ಶಿವಕುಮಾರ್ ಅವರಿಗೆ ಮೂವತ್ತು ಭಾರಿ ಐಟಿ ನೋಟೀಸ್ ಜಾರಿ ಮಾಡಿದ್ದು, ಸೋಲಿನ ಭಯದಿಂದ  ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos