ಪ್ರೇರಣಾ ಜೊತೆ ಚಿರು ಸಖತ್​ ಸ್ಟೆಪ್ಸ್

ಬೆಂಗಳೂರು, ಜು.02 :  ಚಿರಜೀವಿ ಸರ್ಜಾ ಅವರ ಅಕಾಲಿಕ ಅಗಲಿಕೆಯ ನೋವಿನಿಂದ ಇನ್ನೂ ಅವರ ಕುಟುಂಬದವರು ಹೊರ ಬಂದಿಲ್ಲ. ಅವರ ನೆನಪಿನಲ್ಲೇ ಇರುವ ಕುಟುಂಬಸ್ಥರು ಸಾಮಾಜಿಕ ಜಾಲತಾಣದಲ್ಲಿ ಅವರ ಕುರಿತಾಗಿ ಪೋಸ್ಟ್​ ಮಾಡುತ್ತಾ ಭಾವುಕರಾಗುತ್ತಿದ್ದಾರೆ.

ಧ್ರುವ ಸರ್ಜಾ ಹೆಂಡತಿ ಪ್ರೇರಣಾ ಜೊತೆ ಡ್ಯಾನ್ಸ್​ ಮಾಡಿದ್ದ ಚಿರು ಸರ್ಜಾ  ವಿಡಿಯೋ  ಸಖತ್ ವೈರಲ್ ಆಗಿದೆ. ಇತ್ತೀಚೆಗಷ್ಟೆ ಚಿರು ಅವರ ಹೆಂಡತಿ ಮೇಘನಾ ರಾಜ್,  ಸಹೋದರ ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಚಿರು ಕುರಿತಾಗಿ ಭಾವುಕರಾಗಿ ಪೋಸ್ಟ್​ ಮಾಡಿದ್ದರು. ಧ್ರುವ ಸರ್ಜಾ ಅವರ ಮಡದಿ ಪ್ರೇರಣಾ ಸಹ ತಮ್ಮ ಬಳಿ ಇದ್ದ ಒಂದು ವಿಡಿಯೋ ಹಂಚಿಕೊಂಡಿದ್ದಾರೆ.


ಫ್ರೆಶ್ ನ್ಯೂಸ್

Latest Posts

Featured Videos