ತಾಯಿ, ಮಗುವಿನ ಕ್ರಿಕೆಟ್ ಸಖತ್ ವೈರಲ್

ನವದೆಹಲಿ, ಜ. 14 : ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರು ಸೋಮವಾರ ಟ್ವೀಟರ್ ಮೂಲಕ ಒಂದು ವಿಡಿಯೋ ಹರಿಬಿಟ್ಟಿದ್ದು, ಇದು ಕ್ರಿಕೆಟ್ ಆಟ ಎಷ್ಟು ಜನಪ್ರಿಯವಾಗಿದೆ ಎಂಬ ಕಥೆಯನ್ನು ಹೇಳುತ್ತದೆ. ಈ ವಿಡಿಯೋ 27 ಸೆಕೆಂಡುಗಳುಳ್ಳದಾಗಿದ್ದು, ತಾಯಿವೊಬ್ಬರು ಬೌಲಿಂಗ್ ಮಾಡುವುದನ್ನ, ಮಗು ಬ್ಯಾಟಿಂಗ್ ಮಾಡುವುದನ್ನು ಇಲ್ಲಿ ಕಾಣಬಹುದು. ಈ ಮಗುವಿಗೆ ಎರೆಡರಿಂದ ಮೂರು ವರ್ಷ ವಯಸ್ಸಿನದಾಗಿದ್ದು, ಪ್ಲಾಸ್ಟಿಕ್ ಚೆಂಡನ್ನು ರಸ್ತೆಯ ಬದಿಗೆ ಪಕ್ಕಕ್ಕೆ ಒಡೆಯುತ್ತಿರುವುದನ್ನ ಕಾಣಬಹುದು.
ಈ ವಿಡಿಯೋ ಪೊಸ್ಟ್ ಮಾಡಿ ಮೊಹಮ್ಮದ್ ಕೈಫ್ ಅವರು ಶಿರ್ಷಿಕೆ ಸಹ ಕೊಟ್ಟಿದ್ದು, ಮದರ್ ಬೌಲಿಂಗ್ ಚೈಲ್ಡ್ ಬ್ಯಾಟಿಂಗ್. ಕೇವಲ ಒಂದು ಪದ ಬ್ಯೂಟಿಫುಲ್ ಎಂದು ಕೈಫ್ ಬರೆದಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ಕಲವೇ ಕ್ಷಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನು ಗೆದ್ದಿದೆ.

ಫ್ರೆಶ್ ನ್ಯೂಸ್

Latest Posts

Featured Videos