ಬೆಂಗಳೂರು: ಭಾರತ ತಂಡದ ಮೊದಲ ಬೌಲರ್ ಆಗಿ ಮಿಂಚಿದ ಮೊಹಮ್ಮದ್ ಸಿರಾಜ್. ಭಾರತ ಕ್ರಿಕೆಟ್ ತಂಡದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಷ್ಟೇನು ಅದೃಷ್ಟ ಕೈಹಿಡಿಯಲಿಲ್ಲ. ಆಡಿದ 11 ಪಂದ್ಯಗಳಲ್ಲಿ 33.50 ಸರಾಸರಿಯಲ್ಲಿ 14 ವಿಕೆಟ್ ಪಡೆದರು. ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೋಡಿ ಮಾಡುವಲ್ಲಿ ವಿಫಲರಾಗಿ ದುಬಾರಿಯಾದರು. ಪಂದ್ಯ ಮುಗಿದ ಬಳಿಕ ವಿಶ್ವಕಪ್ ಎತ್ತಿ ಹಿಡಿಯಲು ಸಾಧ್ಯವಾಗಲಿಲ್ಲ ಎಂಬ ದುಃಖದಲ್ಲಿ ಕಣ್ಣೀರು ಕೂಡ ಇಟ್ಟಿದ್ದರು. ವಿಶ್ವಕಪ್ ಮುಗಿದು ಎರಡು ದಿನವಾಗಿದೆ.
29 ವರ್ಷದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿರಾಜ್ ಮದುವೆಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗುತ್ತಿದೆ. ಸಿರಾಜ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಸದ್ಯದಲ್ಲೇ ಮದುವೆ ಆಗಲಿದ್ದಾರಂತೆ. ವಧು ಕೂಡ ಹೈದರಾಬಾದ್‌ನವರೇ ಆಗಿದ್ದಾರೆ. ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಮಧ್ಯದಲ್ಲಿ ಸಿರಾಜ್ ಮದುವೆ ನಡೆಯಲಿದೆ ಎಂದು ವರದಿಯಾಗಿದೆ. ಸಿರಾಜ್ ಮದುವೆಗೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಗಮಿಸಲಿದ್ದಾರಂತೆ. ಆದರೆ, ಈ ಸುದ್ದಿ ಎಷ್ಟು ಸತ್ಯ ಎಂಬುದು ತಿಳಿದಿಲ್ಲ. ಸಿರಾಜ್ ಕಡೆಯಿಂದಲೇ ಅಧಿಕೃತ ಘೋಷಣೆ ಆಗಬೇಕು.