ಮೋದಿಗೆ ಮನಸ್ಸಾಕ್ಷಿ ಇದ್ದರೆ ರಾಜೀನಾಮೆ ನೀಡಬೇಕಿತ್ತು: ಸಿಪಿಐಂ ಪೊಲಿಟ್‍ ಬ್ಯೂರೊ

ಮೋದಿಗೆ ಮನಸ್ಸಾಕ್ಷಿ ಇದ್ದರೆ ರಾಜೀನಾಮೆ ನೀಡಬೇಕಿತ್ತು: ಸಿಪಿಐಂ ಪೊಲಿಟ್‍ ಬ್ಯೂರೊ

ದೆಹಲಿ: ಅಲೋಕ್‍ ವರ್ಮ ಸಿಬಿಐ ನಿರ್ದೇಶಕರ ತಮ್ಮ ಹುದ್ದೆಯಲ್ಲಿ ಕಾರ್ಯನಿರ್ವಹಿಸದಂತೆ ಮಾಡಿರುವ ಮೋದಿ ಸರಕಾರದ ಕ್ರಮವನ್ನು ಸುಪ್ರಿಂಕೋರ್ಟ್‍ ರದ್ದುಮಾಡಿ, ಅವರನ್ನು ಆ ಹುದ್ದೆಯಲ್ಲಿ ಮುಂದುವರಿಸಬೇಕು ಎಂದು  ತೀರ್ಪು ನೀಡಿರುವುದು ಮೋದಿ ಸರಕಾರ ಹೇಗೆ ಸಿಬಿಐನಂತಹ ಸಂಸ್ಥೆಗಳ ಕಾರ್ಯನಿರ್ವಹಣೆಯ ಪ್ರತಿಯೊಂದು ನಿಯಮ, ವಿಧಿ-ವಿಧಾನವನ್ನು ತಲೆಕೆಳಗೆ ಮಾಡುತ್ತಿದೆ ಮತ್ತು ತನ್ನ ಸಂಕುಚಿತ ರಾಜಕೀಯ ಹಿತಾಸಕ್ತಿಗಳಿಗೆ ಒಳಪಡಿಸುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

ಈ ತೀರ್ಪು ಮೋದಿ ಸರಕಾರದ ಮೇಲಿನ, ನಿರ್ದಿಷ್ಟವಾಗಿ, ಸ್ವತಃ ಪ್ರಧಾನಮಂತ್ರಿಗಳ ಮೇಲಿನ ಒಂದು ಬಲವಾದ ದೋಷಾರೋಪಣೆ ಎಂದು ಅದು ಹೇಳಿದೆ.

ಏಕೆಂದರೆ ಸಿಬಿಐ ಕೆಲಸ ನಿರ್ವಹಿಸುತ್ತಿರುವುದು ಅವರ ನೇರ ಉಸ್ತುವಾರಿಯಲ್ಲಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಡಿಯಲ್ಲಿ.  ಪ್ರಧಾನಮಂತ್ರಿಗಳಿಗೆ ಮನಸ್ಸಾಕ್ಷಿ ಎಂಬುದಿದ್ದಿದ್ದರೆ ಅವರು ರಾಜೀನಾಮೆ ನೀಡಬೇಕಿತ್ತು. ಮುಂಬರುವ ಚುನಾವಣೆಗಳಲ್ಲಿ ಜನತೆ ಅವರನ್ನು ಅಧಿಕಾರದಿಂದ ತೆಗೆಯಲೇಬೇಕು ಎಂಬುದಕ್ಕೆ ಇದು ಮತ್ತೊಂದು ಕಾರಣವಾಗುತ್ತದೆ ಎಂದು ಪೊಲಿಟ್‍ ಬ್ಯೂರೊ ಹೇಳಿದೆ.

ಫ್ರೆಶ್ ನ್ಯೂಸ್

Latest Posts

Featured Videos