ಮೋದಿಯವರೆ ಮುಂದಿನ ಪ್ರಧಾನಿ: ಸುರೇಶ್‍ಗೌಡ

ಮೋದಿಯವರೆ ಮುಂದಿನ  ಪ್ರಧಾನಿ: ಸುರೇಶ್‍ಗೌಡ

ಮಾ.1,ನ್ಯೂಸ್ ಎಕ್ಸ್ ಪ್ರೆಸ್, ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ  ಗೆಲುವು ಸಾಧಿಸಲಿದ್ದು, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ಖಚಿತ ಎಂದು ಮಾಜಿ ಶಾಸಕ ಬಿ.ಸುರೇಶ್ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದಿನಕ್ಕೊಬ್ಬರು ತಾವೇ ಪ್ರಧಾನಿ ಎಂಬಂತೆ ಮಾಹಿತಿ ನೀಡುತ್ತಿದ್ದಾರೆ. ಮಾಯಾವತಿ, ರಾಹುಲ್ಗಾಂಧಿ ಹಾಗೂ ಮಮತಾಬ್ಯಾನರ್ಜಿ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಈಗಾಗಲೇ ಪ್ರಧಾನಿಯಾದವರಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.

ಇವರ್ಯಾರೂ ಪ್ರಧಾನಿಯಾಗುವುದಿಲ್ಲ. ಮೋದಿಯವರೇ ಮತ್ತೆ ಈ ದೇಶದ ಪ್ರಧಾನಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಯಾಗಿದ್ದೇನೆ. ಆದರೆ, ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ತಲೆಬಾಗುತ್ತನೆ ಎಂದು ತಿಳಿಸಿದರು.

ಪಾಕ್ ಮೇಲಿನ ದಾಳಿಯಿಂದಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರಲ್ಲಾ ಎಂಬ ಪ್ರಶ್ನೆಯು ಸುದ್ದಿಗಾರರನ್ನು ಕಾಡುತಿದೆ.

 ಬಿ.ಸುರೇಶ್ ಗೌಡ, ಪತ್ರಕರ್ತರರಿಗೆ ನೀಡಿದ ಉತ್ತರ: ಎಲ್ಲಾ ಪತ್ರಕರ್ತರು ಒಮ್ಮೆಲೆ ಬಿಎಸ್ವೈ ವಿರುದ್ಧ ಮುಗಿ ಬಿದ್ದಾಗ ಎಚ್ಚೆತ್ತ ಸುರೇಶ್ಗೌಡರು, ಇದರ ಬಗ್ಗೆ ನನಗೆ ಸರಿಯಾಗಿ ಏನೂ ಗೊತ್ತಿಲ್ಲ ಎಂದು ಹೇಳಿ ಜಾರಿಕೊಂಡರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಕುಮಾರ್, ಬಿಜೆಪಿ ಮುಖಂಡ ಲಕ್ಷ್ಮೀಶ್ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos