ಅಮೆರಿಕ ಅಧ್ಯಕ್ಷನಿಗೆ ಚರಕ ಪರಿಚಯಿಸಿದ ಮೋದಿ

ಅಮೆರಿಕ ಅಧ್ಯಕ್ಷನಿಗೆ ಚರಕ ಪರಿಚಯಿಸಿದ ಮೋದಿ

ಅಹಮದಾಬಾದ್, ಫೆ. 24: ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ಬಂದಿಳಿದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಸಬರಮತಿಗೆ ಬಂದಿರುವ ಟ್ರಂಪ್.. ನರೇಂದ್ರ ಮೋದಿಯ ಖಾದಿ ಅಂಗವಸ್ತ್ರವನ್ನ ಟ್ರಂಪ್ ಅವರಿಗೆ ಕೊಡುವ ಮೂಲಕ ಸಬರಮತಿಗೆ ಸ್ವಾಗತಿಸಿದರು. ಮೋದಿ ಹಾಗೂ ಟ್ರಂಪ್ ಗಾಂಧೀಜಿ ಭಾವಚಿತ್ರಕ್ಕೆ ಖಾದಿ ನೂಲಿನ ಹಾರ ಹಾಕುವ ಮೂಲಕ ನಮನ ಸಲ್ಲಿಸಿದರು. ಇಲ್ಲಿ ಮಹಾತ್ಮಾ ಗಾಂಧಿಯವರ ಸ್ಮಾರಕಕ್ಕೆ ಟ್ರಂಪ್ ಗೌರವ ಸಲ್ಲಿಸಲಿದ್ದಾರೆ.

ಸಬರಮತಿಯಲ್ಲಿ ಮಹಾತ್ಮಾ ಗಾಂಧಿ ಸುಮಾರು 12 ವರ್ಷಗಳ ಕಾಲ ತಮ್ಮ ಪತ್ನಿ ಜೊತೆಗೆ ಇದ್ದರು. ಸದ್ಯ ಪ್ರಧಾನಿ ಮೋದಿ ಸಬರಮತಿಯ ಮಹತ್ವವನ್ನ ಟ್ರಂಪ್ ಅವರಿಗೆ ವಿವರಿಸುತ್ತಿದ್ದಾರೆ. ಚರಕದ ಬಳಿ ಕೆಲಕಾಲ ಟ್ರಂಪ್, ಮೆಲಾನಿಯ ಟ್ರಂಪ್ ಮತ್ತು ನರೇಂದ್ರ ಮೋದಿ ಕುಳಿತಿದ್ದರು. ಈ ವೇಳೆ ಪ್ರಧಾನಿ ಮೋದಿಯೇ ಗೈಡ್ ಆಗಿ ಟ್ರಂಪ್ ಗೆ ಸಬರಮತಿ ಆಶ್ರಮದ ವಿಶೇಷತೆ ಬಗ್ಗೆ ವಿವರಣೆ ನೀಡಿದರು. ಜೊತೆಗೆ ಗಾಂಧೀಜಿ ಚರಕದ ಮುಂದೆ ಕುಳಿತ ಟ್ರಂಪ್, ಚರಕವನ್ನ ತಿರುಗಿಸಿ, ಅದು ಹೇಗೆ ಕಾರ್ಯನಿರ್ವಹಿಸುತ್ತೆ ಎಂದು ವೀಕ್ಷಿಸಿದರು. ಬಳಿಕ ಆಶ್ರಮದ ಸಿಬ್ಬಂದಿ ಬಂದು ಚರಕದಲ್ಲಿ ನೇಯ್ಗೆ ಮಾಡುವುದನ್ನ ತೋರಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos