ಅಮೆರಿಕ ಅಧ್ಯಕ್ಷನಿಗೆ ಅದ್ದೂರಿಯಾಗಿ ಸ್ವಾಗತಿಸಿದ ಮೋದಿ

ಅಮೆರಿಕ ಅಧ್ಯಕ್ಷನಿಗೆ ಅದ್ದೂರಿಯಾಗಿ ಸ್ವಾಗತಿಸಿದ ಮೋದಿ

ಅಹಮದಾಬಾದ್, ಫೆ. 24: ನಮಸ್ತೆ ಟ್ರಂಪ್ ಕಾರ್ಯಕ್ರಮದ ಹಿನ್ನೆಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಹಮದಾಬಾದ್ನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಏರ್ಫೋರ್ಸ್-1 ವಿಮಾನದಲ್ಲಿ ಬಂದಿಳಿದ ಟ್ರಂಪ್, ಅವರ ಪತ್ನಿ ಮೆಲಾನಿಯ ಮತ್ತು ಮಗಳು ಇವಾಂಕಾ ಟ್ರಂಪ್ ಅವರನ್ನ ಪ್ರಧಾನಿ ಮೋದಿ ಆಹ್ವಾನಿಸಿದರು. ಟ್ರಂಪ್ ಮತ್ತು ಮೋದಿ ಪರಸ್ಪರ ತಬ್ಬಿಕೊಳ್ಳುವ ಮೂಲಕ ಕುಶಲೋಪರಿ ವಿಚಾರಿಸಿಕೊಂಡರು. ಈ ವೇಳೆ ಸಾಂಪ್ರದಾಯಿಕ ರೀತಿಯಲ್ಲಿ ಟ್ರಂಪ್ಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಜಾನಪದ ನೃತ್ಯ, ವಾದ್ಯಮೇಳಗಳು ಮೊಳಗಿದವು. ನಂತರ ವಿಮಾನ ನಿಲ್ದಾಣದಿಂದ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಸಬರಮತಿ ಅಶ್ರಮದತ್ತ ಕಾರ್ಗಳಲ್ಲಿ ಹೊರಟರು.

 

ಫ್ರೆಶ್ ನ್ಯೂಸ್

Latest Posts

Featured Videos