ಮಾಡರ್ನ್ ರೈತ ಬೆಳ್ಳಿತೆರೆಗೆ

ಮಾಡರ್ನ್ ರೈತ ಬೆಳ್ಳಿತೆರೆಗೆ

ಬೆಂಗಳೂರು, ಡಿ. 10: ‘ಕನ್ನಡ ಬಿಗ್ ಬಾಸ್’ ಕಾರ್ಯಕ್ರಮದ 6ನೇ ಸಂಚಿಕೆಯ ಸ್ಪರ್ಧಿ ಮಾಡರ್ನ್ ರೈತ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಶಶಿಕುಮಾರ್ ಇದೀಗ ನಾಯಕನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಹೌದು, ಈ ಮಾಡರ್ನ್ ರೈತ ಈಗ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಾಡರ್ನ್ ರೈತ ಅಭಿನಯಿಸುತ್ತಿರುವ ಚಿತ್ರದ ಹೆಸರು ‘ಮೆಹಬೂಬ’.  ಇವರಿಗೆ ಜೋಡಿಯಾಗಿ ‘ಗೊಂಬೆಗಳ ಲವ್’ ಖ್ಯಾತಿಯ ನಟಿ ಪಾವನಾ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರವನ್ನು ಪ್ರಸನ್ನ ನಿರ್ಮಿಸುತ್ತಿದ್ದು, ಇವರು ಈ ಹಿಂದೆ ‘ಬ್ಯೂಟಿಫುಲ್ ಮನಸುಗಳು’, ‘ನೀರ್ದೋಸೆ’ ಚಿತ್ರಗಳ ಮೂಲಕ ಯಶಸ್ಸು ಕಂಡಿದ್ದಾರೆ.

ಇದೊಂದು ಎಮೋಷನಲ್ ಲವ್ಸ್ಟೋರಿಯಾಗಿದ್ದು, 2 ಪ್ರತ್ಯೇಕ ಧರ್ಮದ ಹುಡುಗ-ಹುಡುಗಿಯ ನಡುವೆ ಪ್ರೀತಿ ಚಿಗುರೊಡೆದಾಗ ಏನಾಗುತ್ತದೆ ಎಂಬುದು ಚಿತ್ರದ ಒಂದೆಳೆ ಕಥೆಯಾಗಿದೆ. ಚಿತ್ರವನ್ನು ಅನೂಪ್ ಆಯಂಟೋನಿ ನಿರ್ದೇಶನ ಮಾಡುತ್ತಿದ್ದು, ನಾಳೆ (ಡಿ.11) ಮುಹೂರ್ತ ನೆರವೇರಿಸಲಾಗುತ್ತಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೂಡುತ್ತಿದ್ದು, ಕಥಾನಾಯಕನ ಪಾತ್ರಕ್ಕೆ ಶಶಿಕುಮಾರ್ ಹೇಗೆ ನ್ಯಾಯ ಸಲ್ಲಿಸುತ್ತಾರೆ ಎಂಬ ಕುತೂಹಲಗಳು ಮೂಡಿವೆ.

ಫ್ರೆಶ್ ನ್ಯೂಸ್

Latest Posts

Featured Videos