ಮೊದಲ ಬಾರಿಗೆ ಮತದಾನದ ಹಕ್ಕು ಚಲಾಯಿಸಿದ ಹನುಮಂತ

ಮೊದಲ ಬಾರಿಗೆ ಮತದಾನದ ಹಕ್ಕು ಚಲಾಯಿಸಿದ ಹನುಮಂತ

ಹಾವೇರಿ, ಏ. 23, ನ್ಯೂಸ್ ಎಕ್ಸ್ ಪ್ರೆಸ್: ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹಾವೇರಿಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ಗ್ರಾಮದ ಮತಗಟ್ಟೆ ನಂ.16 ರಲ್ಲಿ, ಸರಿಗಮಪ ಕಾರ್ಯಕ್ರಮದಿಂದ ನಾಡಿನ ಮನೆಮಾತಾದವರು ಹನುಮಂತ. ಇದೀಗ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೊದಲ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

ಅಲ್ಲದೆ ಹಾವೇರಿಯಲ್ಲಿ ಹನುಮಂತ ಚುನಾವಣಾ ಐಕಾನ್ ಕೂಡಾ ಆಗಿದ್ದಾರೆ.

ಮತ ಚಲಾಯಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಹನುಮಂತ, ತಾನು ಮೊದಲ ಬಾರಿಗೆ ವೋಟ್ ಮಾಡುತ್ತಿದ್ದೇನೆ. ಮತದಾನ ಎಲ್ಲರ ಹಕ್ಕು, ತಪ್ಪದೇ ಎಲ್ಲರೂ ಮತ ಚಲಾಯಿಸಿ. ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಅಂತಾ ಜನರಿಗೆ ಸಂದೇಶ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos