ಮೊಬೈಲ್ ಫೋನ್ ವಿತರಣೆ

ಮೊಬೈಲ್ ಫೋನ್ ವಿತರಣೆ

ಬೇಲೂರು: ಪೋಷಣ ಅಭಿಯಾನ ಯೋಜನೆಯಡಿ ಇಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಫೋನ್ ವಿತರಿಸಲಾಯಿತು.
ಶ್ರೀಚನ್ನಕೇಶವಸ್ವಾಮಿ ದೇವಾಲಯದ ದಾಸೋಹ ಸಭಾಭವನದಲ್ಲಿ ನಡೆದ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಆಶಾಕಾರ್ಯಕರ್ತೆಯರು ಕೊರೋನಾ ವಾರಿರ‍್ಸ್ ಆಗಿ ಸೇವೆಸಲ್ಲಿಸಿದ್ದಾರೆ.
ಉತ್ತಮ ಕೆಲಸಕಾರ್ಯಗಳ ನಿರ್ವಹಣೆ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸರಕಾರ ಮೊಬೈಲ್ ಫೋನ್ ನೀಡುತ್ತಿದ್ದು ಇದರಿಂದ ಇನ್ನಷ್ಟು ಚುರುಕಾಗಲಿದೆ ಹಾಗೂ ಕೆಲವೊಂದು ಮಾಹಿತಿಯನ್ನು ಮೊಬೈಲ್ ಮೂಲಕವೆ ರವಾನಿಸುವುದರಿಂದ ವೃಥಾ ಕಚೇರಿಗೆ ಅಲೆಯವುದು ತಪ್ಪಲಿದೆ. ಮೊಬೈಲ್ ಬೇರೆ ವಿಷಯಕ್ಕೆ ಬಳಕೆ ಸಲ್ಲದು ಎಂದರು.
ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಶುದ್ಧ ಕುಡಿಯುವ ನೀರು, ಗುಣಮಟ್ಟದ ಆಹಾರ ನೀಡಿಕೆ ಬಗ್ಗೆ ಗಮನ ಹೆಚ್ಚಾಗಿರಬೇಕು. ಅಂಗನವಾಡಿ ಕೇಂದ್ರಕ್ಕೆ ಏನೆಲ್ಲಾ ಬೇಕು ಎಂಬುದನ್ನು ಸಮೀಪದ ಗ್ರಾ.ಪಂ. ಅಧಿಕಾರಿಗಳಿಗೆ ತಿಳಿಸಿ ಸೌಲಭ್ಯ ಕಲ್ಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಇಂದಿರಾ ಮಾತನಾಡಿ, ಬಾಕಿ ಇರುವ ಗೌರವಧನ ವಿತರಿಸಬೇಕು. ಗ್ರಾ.ಪಂ.ಯಿಂದ ಮಾಸ್ಕ್, ಹ್ಯಾಂಡ್‌ಗ್ಲೌಸ್, ಸ್ಯಾನಿಟರಿ ಬಾಟಲ್ ವಿತರಿಸಿಲ್ಲ. ನಮಗೆ ಆರೋಗ್ಯದ ದೃಷ್ಠಿಯಿಂದ ರಕ್ಷಣೆ ಅಗತ್ಯವಿದೆ ಎಂದು ಹೇಳಿದರು. ಶ್ರೀಚನ್ನಕೇಶವಸ್ವಾಮಿ ದೇವಾಲಯ ಕಾರ್ಯನಿರ್ವಾಹಣಾಧಿಕಾರಿ ಉಮಾ, ತಾ.ಪಂ.ಅಧ್ಯಕ್ಷೆ ಇಂದಿರಾರವಿಕುಮಾರ್, ಶಿಶುಅಭಿವೃದ್ಧಿ ಇಲಾಖೆ ಮೇಲ್ವೀಚಾರಕಿ ಪೂರ್ಣಿಮಾ ಮಾತನಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos