ಸಚಿವರಿಗೆ ‘ಹೈ’ ಶಾಕ್?

ಸಚಿವರಿಗೆ ‘ಹೈ’  ಶಾಕ್?

ಬೆಂಗಳೂರು, ಜ. 31 : ಸಂಪುಟ ವಿಸ್ತರಣೆ ಸರ್ಕಸ್ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಶೀಘ್ರದಲ್ಲೇ ನಡೆಯುವ ಸಂಪುಟ ವಿಸ್ತರಣೆ ಯಾವ ರೀತಿ ನಡೆಯಲಿದೆ ಅನ್ನೋದೇ ಕುತೂಹಲ. ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಯಾವ ಕೆಲವು ಅವಕಾಶಗಳನ್ನು ತನ್ನ ಮುಂದಿರಿಸಿಕೊಂಡಿದೆ. ಇದರ ಭಾಗವಾಗಿ ಸಚಿವ ಸಂಪುಟ ವಿಸ್ತರಣೆ ವೇಳೆ ಶಾಕ್ ಕೊಡಲು ಹೈಕಮಾಂಡ್ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಈ ಶಾಕ್ ಕೆಲ ಹಾಲಿ ಸಚಿವರನ್ನು ಸಂಪುಟದಿಂದ ಕೈಬಿಡುವ ಮೂಲಕವಾಗಲಿ ಅಥವಾ ಕೆಲವರ ಖಾತೆಗಳ ಬದಲಾವಣೆ ಮೂಲಕವಾಗಲಿ ಬರಲಿದೆ ಎಂದು ಹೇಳಲಾಗುತ್ತಿದೆ.
ಸದ್ಯದ ಮಾಹಿತಿಗಳ ಪ್ರಕಾರ ಸಚಿವ ಸಂಪುಟ ವಿಸ್ತರಣೆ ವೇಳೆ ಇಬ್ಬರು ಹಾಲಿ ಸಚಿವರಿಗೆ ಹೈಕಮಾಂಡ್ ಕಡೆಯಿಂದ ಶಾಕ್ ಕಾದಿದೆ. ಸಂಪುಟದಿಂದ ಇಬ್ಬರು ಸಚಿವರಿಗೆ ಹೈಕಮಾಂಡ್ ಕೊಕ್ ಕೊಡಲಿದೆ. ಇಬ್ಬರನ್ನು ಕೈಬಿಟ್ಟು ಅವರ ಸ್ಥಾನಗಳಿಗೆ ಮತ್ತಿಬ್ಬರನ್ನು ಸಂಪುಟಕ್ಕೆ ಸೇರಿಸಲು ಹೈಕಮಾಂಡ್ ಪ್ಲಾನ್ ಮಾಡ್ಕೊಂಡಿದೆ ಎಂಬುದಾಗಿ ತಿಳಿದುಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos