ಕೊನೆ ಸಿಕ್ತು ಪಾರ್ಕಿಂಗ್ ವ್ಯವಸ್ಥೆ

ಕೊನೆ ಸಿಕ್ತು ಪಾರ್ಕಿಂಗ್ ವ್ಯವಸ್ಥೆ

ಬೆಂಗಳೂರು, ಆ.03: ಎಂಜಿ ರಸ್ತೆಯಲ್ಲಿ ದಟ್ಟ ವಾಹನದ ಓಡಾಟದ ಸಂದಣೆಯಿಂದ ವಾಹನ ನಿಲ್ಲಿಸುವುದೇ ದೊಡ್ಡ ಸಮಸ್ಯೆಯಾಗಿತ್ತು, ಈಗ ಈ ಸಮಸ್ಯೆ ಪರಿಹಾರವಾಗಿದ್ದು ವಾಹನ ಸವಾರರಿಗೆ ಖುಷಿ ತಂದಿದೆ.
ಹೌದು ಇದೀಗ ಎಂಜಿ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಲು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ನಾಲ್ಕುದಿನಗಳ ಕಾಲ ಟ್ರಯಲ್ ನೋಡಿ ಬಳಿಕ ಅನುಮತಿ ನೀಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎಂಜಿ ರಸ್ತೆ ಹಾಗೂ ಕಾಮರಾಜ ರಸ್ತೆಯ ಮಧ್ಯೆ ಸುರಂಗ ನಿಲ್ದಾಣಗಳ ನಮ್ಮ ಮೆಟ್ರೋ ಕಾಮಗಾರಿ ನಡೆಯುವ ಕಾರಣ, ಜೂನ್ 15ರಿಂದ ಎಂಜಿ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಆದರೆ ಈ ನಿರ್ಣಯದಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಅಂಗಡಿ ಮತ್ತು ಬಿಲ್ಡಿಂಗ್‌ಗಳ ಮಾಲೀಕರು ಕೂಡ ತಮ್ಮ ವಾನಗಳನ್ನು ನಿಲ್ಲಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಲ್ಲರ ಒತ್ತಡದ ಮೇರೆಗೆ ಮತ್ತೆ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿಕೊಡಲು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಎಂಜಿ ರಸ್ತೆಯಲ್ಲಿ ಒಂದು ಬದಿಯಲ್ಲಿ ಮಾತ್ರ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಂಚಾರ ಪೋಲಿಸ್ ಅಧಿಕಾರಗಳು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos