ಮೆಟ್ರೋ: ಲಕ್ಷಾಂತರ ಮೌಲ್ಯದ ಕಾಪರ್ ಕಳ್ಳತನ

  • In State
  • June 25, 2019
  • 346 Views
ಮೆಟ್ರೋ: ಲಕ್ಷಾಂತರ ಮೌಲ್ಯದ ಕಾಪರ್ ಕಳ್ಳತನ

ಬೆಂಗಳೂರು, ಜೂನ್. 25: ನಮ್ಮ ಮೆಟ್ರೋದ ಹಳಿಗೆ ಅಳವಡಿಸುವ ಕಾಪರ್ ತಂತಿಗಳು ಕಳ್ಳತನವಾಗಿವೆ. ಬೈಯಪ್ಪನಹಳ್ಳಿ- ವಿವೇಕಾನಂದ ಮೆಟ್ರೋ ನಿಲ್ದಾಣದ ಹಳಿಗಳಿಗೆ ಅಳವಡಿಸಲು ತಂದಿದ್ದ ಐದು ಲಕ್ಷ ಮೌಲ್ಯದ 1,123 ಕೆಜಿ ಬೆಲೆಬಾಳುವ ಕಾಪರ್ ತಂತಿಗಳನ್ನು ಕದ್ದಿದ್ದಾರೆ.

ಬಿಎಂಆರ್ಸಿಎಲ್ ಎಂಜಿನಿಯರ್ ಕೆವಿಎಸ್ಟಿ ರಾಜು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಲೋಕೊ ಪೈಲಟ್ ಕಾಮಗಾರಿ ವೇಳೆ ಕಾಪರ್ ವೈಯರ್ ಹಾಗೂ ಕಂಡಕ್ಟರ್ ಇಲ್ಲದಿರುವುದನ್ನು ಗಮನಿಸಿ ಎಂಜಿನಿಯರ್ಗೆ ವಿಷಯ ತಿಳಿಸಿದ್ದಾರೆ. 490 ಮೀಟರ್ ಉದ್ದದ ತಂತಿಯನ್ನು ಕಳ್ಳತನ ಮಾಡಿದ್ದಾರೆ.

ಮೇ 15ರಿಂದ ಜೂನ್ 5ರವರೆಗೂ ಸಾಕಷ್ಟು ಜನ ಈ ಮಾರ್ಗದಲ್ಲಿ ಕೆಲಸ ಮಾಡಿದ್ದಾರೆ ಆದರೆ ಈ ಕೆಲಸವನ್ನು ಯಾರು ಮಾಡಿದ್ದಾರೆ ಎಂದು ಕಂಡುಹಿಡಿಯುವುದು ಕಷ್ಟವಾಗಿದೆ.

ಕೆಲವು ರಸ್ತೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳ ಮೂಲಕ ಮಾಹಿತಿ ಏನಾದರೂ ಲಭ್ಯವಾಗಲಿದೆಯೇ ಎಂದು ಕಾದು ನೋಡಬೇಕಿದೆ.

 

ಫ್ರೆಶ್ ನ್ಯೂಸ್

Latest Posts

Featured Videos