ಹೊರವರ್ತುಲ ರಸ್ತೆಗೆ ಮೆಟ್ರೋ

ಹೊರವರ್ತುಲ ರಸ್ತೆಗೆ ಮೆಟ್ರೋ

ಬೆಂಗಳೂರು, ಡಿ. 22: ನಗರದ ಹೊರವರ್ತುಲ ರಸ್ತೆಗೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸಲು ಬಿಎಂಆರ್‌ಸಿಎಲ್ ಮೊದಲ ಹೆಜ್ಜೆ ಇಟ್ಟಿದೆ. 19 ಕಿ. ಮೀ. ಮಾರ್ಗದ ಯೋಜನೆಗೆ 5, 950 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಫೇಸ್ 2 -ಎ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. ಜನವರಿ 27 ಟೆಂಡರ್ ಸಲ್ಲಿಕೆಗೆ ಕೊನೆಯ ದಿನವಾಗಿದೆ. 2020ರಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದ್ದು, ಮೂರು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಹೊರವರ್ತುಲ ರಸ್ತೆಯ ನಮ್ಮ ಮೆಟ್ರೋ ಮಾರ್ಗ ಕೆ. ಆರ್. ಪುರಂ ಮತ್ತು ಸೆಂಟ್ರಲ್ ಸಿಲ್ಕ ಬೋರ್ಡ್ ನಡುವೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದಲ್ಲಿ ಒಟ್ಟು 13 ಮೆಟ್ರೋ ನಿಲ್ದಾಣಗಳು ಬರುತ್ತವೆ. ಈ ಕಾಮಗಾರಿಯನ್ನು ಬಿಎಂಆರ್‌ಸಿಎಲ್ ಎರಡು ವಿಭಾಗಗಳಾಗಿ ಮಾಡಿದೆ. ಪ್ಯಾಕೇಜ್ 1ರಲ್ಲಿ ಸೆಂಟ್ರಲ್ ಸಿಲ್ಕ ಬೋರ್ಡ್, ಎಚ್‌ಎಸ್‌ಆರ್ ಲೇಔಟ್, ಆಗ್ರಾ, ಇಬ್ಬಲೂರು, ಬೆಳ್ಳಂದೂರು ಮತ್ತು ಕಾಡುಬೀಸನಹಳ್ಳಿ ನಿಲ್ದಾಣಗಳು ಬರುತ್ತವೆ. ಮೊದಲ ಹಂತದ ಕಾಮಗಾರಿಗೆ 731.18 ಕೋಟಿ ವೆಚ್ಚವಾಗುವ ನಿರೀಕ್ಷೆ ಇದೆ. 2ನೇ ಹಂತದಲ್ಲಿ ಏಳು ನಿಲ್ದಾಣಗಳು ಇವೆ. ಕೋಡಿಬೀಸನಹಳ್ಳಿ, ಮಾರತ್‌ಹಳ್ಳಿ, ಇಸ್ರೋ, ದೊಡ್ಡನೆಕುಂದಿ, ಡಿಆರ್‌ಡಿಓ ಸ್ಪೋರ್ಟ್ ಕಾಂಪೆಕ್ಸ್, ಸರಸ್ವತಿ ನಗರ, ಕೆ. ಆರ್. ಪುರಂ ನಿಲ್ದಾಣಗಳು ಬರುತ್ತವೆ.

ಯೋಜನೆಗಾಗಿ ಬಿಎಂಆರ್‌ಸಿಎಲ್ ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ನಿಂದ 3000 ಕೋಟಿ ರೂ. ಸಾಲವನ್ನು ಪಡೆಯಲು ಉದ್ದೇಶಿಸಿದೆ. 2016ರಲ್ಲಿ ಈ ಯೋಜನೆಗೆ 4,200 ಕೋಟಿ ವೆಚ್ಚಾಗಲಿದೆ ಎಂದು ಅಂದಾಜಿಸಲಾಗಿತ್ತು. ವಿಳಂಬದ ಕಾರಣದಿಂದಾಗಿ ವೆಚ್ಚವೂ ಅಧಿಕವಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos