ಅನರ್ಹ ಶಾಸಕ ಎಂಟಿಬಿ ನಾಗರಾಜ್ ದುಬಾರಿ ಕಾರು ಖರೀದಿ

ಅನರ್ಹ ಶಾಸಕ ಎಂಟಿಬಿ ನಾಗರಾಜ್ ದುಬಾರಿ ಕಾರು ಖರೀದಿ

ಬೆಂಗಳೂರು, ಆ.14: ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ಅತೀ ಹೆಚ್ಚು ದುಬಾರಿ ಕಾರನ್ನು ಖರೀದಿ ಮಾಡಿರುವ ಅವರು ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಆಗಮಿಸಿದರು. ಬುಧವಾರ ಎಂಟಿಬಿ ನಾಗರಾಜ್ ರೋಲ್ಸ್ ರಾಯ್ಸ್ ಪ್ಯಾಂಟಮ್ ಕಾರನ್ನು ಖರೀದಿಸಿದ್ದಾರೆ.
ಹೊಸ ಕಾರಿನ ಪೂಜೆ ನಗರದಲ್ಲಿ ನಡೆದಿದ್ದು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಲು ಅವರು ಹೊಸ ಕಾರಿನಲ್ಲಿ ಬಂದರು. ದುಬೈನಲ್ಲಿ ವಿಶೇಷವಾಗಿ ಸಿದ್ಧಪಡಿಸಿದ ಕಾರನ್ನು ಬೆಂಗಳೂರಿಗೆ ತರಲಾಗಿದೆ. ಈ ಕಾರಿನ ಮೌಲ್ಯ ಸುಮಾರು 12 ಕೋಟಿ ಮೌಲ್ಯವನ್ನು ಹೊಂದಿದೆ. ವೈಟ್ ಪೆಟ್ರೋಲ್ನಿಂದ ಈ ಕಾರನ್ನು ಓಡಿಸಲಾಗುತ್ತದೆ. ಹಾಗೆ ಕಾರಿನ ಶರತ್ತುಗಳು ಕೂಡ ಅಷ್ಟೇ ಬಿಗಿಯಾಗಿದೆ, ಎಂತಹ ಶ್ರೀಮಂತರಾದರು ಈ ಕಾರನ್ನು ಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಆದರೆ ಎಂಬಿಟಿ ನಾಗರಾಜ್ ಈ ಕಾರನ್ನು ಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕೆಎ 59, ಎನ್ 888 ನೋಂದಣಿ ಸಂಖ್ಯೆಯನ್ನು ಮಾಡಿಸಿ ಕಾರಿಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿರುವ ಎಂಟಿಬಿ ನಾಗರಾಜ್ ಅದರ ಫೋಟೋವನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos