ಮತ್ತೆ ಬ್ಯಾಟ್ ಬೀಸಲು ಯುವಿ ರೆಡಿ

ಮತ್ತೆ ಬ್ಯಾಟ್ ಬೀಸಲು ಯುವಿ ರೆಡಿ

ಮುಂಬೈ, ಅ. 26 : ಕ್ರಿಕೆಟ್ ಕೆರಿಯರ್ಗೆ ಗುಡ್ ಬೈ ಹೇಳಿದ ಯುವಿ ಈಗ ಮತ್ತೆ ಬ್ಯಾಟಿಂಗ್ ವೈಭವ ನೋಡುವ ಅವಕಾಶವನ್ನು ಅಭಿಮಾನಿಗಳಿಗೆ ಸಿಕ್ಕಿದೆ. ಟೀಂ ಇಂಡಿಯಾ ಮಾಜಿ ಆಟಗಾರ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಮುಂಬರುವ ಅಬುಧಾಬಿ ಟಿ ಟೆನ್ ಲೀಗ್ ನಲ್ಲಿ ಆಡಲಿದ್ದಾರೆ. ಲೀಗ್ನಲ್ಲಿ ಭಾಗವಹಿಸುವ ಮೂಲಕ ಯುವರಾಜ್ ಗಮನ ಸೆಳೆಯಲಿದ್ದಾರೆ.
ಯುವರಾಜ್ ಸಿಂಗ್ ಮುಂಬರುವ ಅಬುಧಾಬಿ ಟಿ ಟೆನ್ ಲೀಗ್ ನಲ್ಲಿ ಆಡಲಿದ್ದು, ಕೂಟದ ಮರಾಠ ಅರೇಬಿಯನ್ಸ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಸ್ವತಃ ಯುವರಾಜ್ ಟ್ವೀಟ್ ಮಾಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಈ ಕೂಟ ನವೆಂಬರ್ 14ರಿಂದ 24ರವರೆಗೆ ನಡೆಯಲಿದೆ.

ಫ್ರೆಶ್ ನ್ಯೂಸ್

Latest Posts

Featured Videos