ಅತ್ಯಾಚಾರ ಖಂಡಿಸಿ ಬೃಹತ್ ಪ್ರತಿಭಟನೆ

ಅತ್ಯಾಚಾರ ಖಂಡಿಸಿ ಬೃಹತ್ ಪ್ರತಿಭಟನೆ

ಗುರುಮಠಕಲ್: ತೆಲಂಗಾಣದ ಸಯೀದಾಬಾದ್ ಸಿಂಗರೇಣಿ ಕಾಲೋನಿಯಲ್ಲಿ ನಡೆದ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಘಟನೆ ಖಂಡಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದಿಂದ ಗುರುಮಠಕಲ್ ತಹಶೀಲ್ದಾರ್ ಕಛೇರಿ ಮುಂದೆ ಬುಧವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಬಂಜಾರ ಸಮಾಜದ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ರಾಠೋಡ ಮಾತನಾಡಿ ಹೈದರಾಬಾದ್‌ನಲ್ಲಿ ಪುಟ್ಟ ಬಾಲಕಿ ಮೇಲೆ ನಡೆದ ಅತ್ಯಾಚಾರ ಸಮಾಜ ತಲೆ ತಗ್ಗಿಸುವ ಘಟನೆಯಾಗಿದೆ. ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು ಕಠಿಣ ಕಾನೂನು ರೂಪಿಸಬೇಕು. ಕೂಡಲೇ ಅತ್ಯಾಚಾರ ಎಸಗಿದ ರಾಜು ಯುವಕನನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು, ಇಲ್ಲದಿದ್ದರೆ ಸಮಾಜದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜದ ವಿಠ್ಠಲ ಮಹರಾಜ, ಜಿಲ್ಲಾ ಅಧ್ಯಕ್ಷ ಬಾಸು ನಾಯ್ಕ್, ತಾಂಡ ನಿರ್ದೇಶಕ ಮನೋಹರ ಪವಾರ್, ಜಿಲ್ಲಾ ಮಹಿಳಾ ಅಧ್ಯಕ್ಷ ಸುನೀತಾ ಬಾಯಿ, ರವಿ ಕೆ ಮುದ್ನಾಳ, ಬಾಲು ರಾಠೋಡ, ಜಮ್ಲಾನಾಯ್ಕ್, ಲಿಂಗ್ಯಾ ನಾಯ್ಕ್, ರಾಜು ಜೆಸಿಬಿ, ಗೋಪಾಲ ರಾಠೋಡ, ವಿಜಯ್, ತುಳಸಿರಾಮ್, ಗುರುನಾಥ ತಲಾರಿ, ಅನೀಲ ಯದ್ಲಾಪೂರ, ಕಾಶಿಬಾಯಿ, ಲಕ್ಷ್ಮೀ ಬಾಯಿ, ಯಲ್ಲಮ್ಮಬಾಯಿ, ಸಮಾಜದ ಮುಖಂಡರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos