ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ಗಳನ್ನ ಹೆಚ್ಚಿನ ದರಕ್ಕೆ ಮಾರುವಂತಿಲ್ಲ

ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ಗಳನ್ನ ಹೆಚ್ಚಿನ ದರಕ್ಕೆ ಮಾರುವಂತಿಲ್ಲ

ನವದೆಹಲಿ, ಮಾ. 21: ದೇಶದಾದ್ಯಂತ ಕೊರೋನ ಸೋಂಕಿನಿಂದ ಇಲ್ಲಿಯವರೆಗೆ ಹಲವಾರು ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಸಹ ಕೊರೋನ ಸೋಂಕಿನಿಂದ ಒಂದು ಬಲಿಯಾಗಿದೆ.

ಈ ಕೊರೋನ ವೈರಸ್ ಹರಡದಂತೆ ರಾಜ್ಯದಲ್ಲಿ ಹಲವಾರು ಕಟ್ಟೆಚ್ಚರವನ್ನು ವಹಿಸಿದ್ದಾರೆ, ವಿಮಾನ ನಿಲ್ದಾಣ, ರೈಲು ನಿಲ್ದಾಣ ಗಳಂತಹ ಜನಸಂದಣಿಯ ಸ್ಥಳಗಳಲ್ಲಿ ಬೇರೆ ರಾಜ್ಯದಿಂದ ಹಾಗೂ ಬೇರೆ ದೇಶದಿಂದ ಬರುವಂತಹ ಜನರನ್ನು ತಪಾಸಣೆ ಮಾಡುತ್ತಾರೆ.

ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ, ಇಡೀ ದೇಶದ ಜನತೆ ಮಾಸ್ಕ್ ಗಳ ಮೊರೆ ಹೋಗಿದೆ. ಹಾಗೆಯೇ ಹ್ಯಾಂಡ್ ಸ್ಯಾನಿಟೈಸರ್ನ್ನೂ ಹಲವರು ಬಳಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಶಾಪ್ಗಳು, ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ಗಳನ್ನ ಡಬಲ್-ತ್ರಿಬಲ್ ದರಕ್ಕೆ ಮಾರಾಟ ಮಾಡುತ್ತಿವೆ. ಅಲ್ಲದೇ ಆನ್ಲೈನ್ನಲ್ಲೂ ಕೆಲವರು ಹೆಚ್ಚಿನ ದರದ ಬಗ್ಗೆ ಅಸಮಾಧನ ವ್ಯಕ್ತಪಡಿಸಿದ್ವಾದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಲವರು, ತಮ್ಮ ಬೇಸರ ಹೊರ ಹಾಕಿ, ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು. ಆದ್ರೀಗ ಸ್ವತಃ ಕೇಂದ್ರ ಸರ್ಕಾರವೇ ಗ್ರಾಹಕರ ಮನವಿಗೆ ಸ್ಪಂದಿಸಿ, ಆರೋಗ್ಯದ ವಿಚಾರದಲ್ಲಿ ವ್ಯಾಪಾರ ಮಾಡುತ್ತಿದ್ದ ಶಾಪ್ಗಳಿಗೆ ಕಟ್ಟುನಿಟ್ಟಿನ ಕ್ರಮ ಹೊರಡಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್, 200 ಮಿಲಿ ಲೀಟರ್ ಸ್ಯಾನಿಟೈಸರ್ ಇರುವ ಬಾಟಲ್ನ್ನ 100 ರೂಪಾಯಿಗಿಂತ ಅಧಿಕ ಬೆಲೆಗೆ ಮಾರುವಂತಿಲ್ಲ. ಹಾಗೆಯೇ ಇತರೇ ಸೈಜ್ನ ಬಾಟಲ್ಗಳಿಗೂ ಅದೇ ಪ್ರಮಾಣದಲ್ಲಿ ದರ ನಿಗದಿ ಮಾಡಲಾಗುತ್ತೆ. ಈ ಬೆಲೆಗಳು 2020ರ ಜೂನ್ 30ರ ವರೆಗೆ ಅನ್ವಯವಾಗುತ್ತೆ ಅಂತಾ ತಿಳಿಸಿದ್ದಾರೆ. ಜೊತೆಗೆ ಮಾಸ್ಕ್ಗಳನ್ನು ಕೂಡ ಬೇಕಾಬಿಟ್ಟಿ ಬೆಲೆಗಳಿಗೆ ಮಾರುವಂತಿಲ್ಲ ಅಂತಾನೂ ಶಾಪ್ಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos