ಮಂಗಳನಲ್ಲಿ ಮನೆ: ಮೂರು ತರಹದ ಡಿಸೈನ್ ಫೈನಲ್!

ಮಂಗಳನಲ್ಲಿ ಮನೆ: ಮೂರು ತರಹದ ಡಿಸೈನ್ ಫೈನಲ್!

ವಾಷಿಂಗ್ಟನ್, ಏ. 2, ನ್ಯೂಸ್ ಎಕ್ಸ್ ಪ್ರೆಸ್: ಮಂಗಳ ಗ್ರಹದಲ್ಲಿಯ ಜೀವ ಸಂಕುಲದ ಕುರಿತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (National Aeronautics and Space Administration) ಹಲವು ವರ್ಷಗಳಿಂದ ಸಂಶೋಧನೆ ನಡೆಸುತ್ತಾ ಬಂದಿದೆ. ಇದೀಗ ನಾಸಾ ಮಂಗಳ ಗ್ರಹದ ಮೇಲೆ ನಿರ್ಮಿಸಲು ನಿರ್ಧರಿಸಿರುವ ಮೂರು ಮನೆಗಳ ತ್ರೀಡಿ ನೀಲ ನಕ್ಷೆಯನ್ನು ಅಂತಿಮಗೊಳಿಸಿದೆ. ‘3 ಡಿ ಪ್ರಿಂಟೆಂಡ್ ಹೆಬಿಟೆಟ್ ಚಾಲೆಂಜ್’ ಎಂಬ ಸ್ಪರ್ಧೆಯನ್ನು ನಾಸಾ 2015ರಿಂದ ಆರಂಭಿಸಿತ್ತು. ಈ ಸ್ಪರ್ಧೆಯಲ್ಲಿ ಮೂರು ಅಂತಿಮ ಸ್ಪರ್ಧಿಗಳ ಹೆಸರನ್ನು ಅಂತಿಮ ಮಾಡಲಾಗಿದೆ. ಈ ಸ್ಪರ್ಧೆಯ ಸ್ಪರ್ಧಿಗಳು ಚಂದ್ರ ಮತ್ತು ಮಂಗಳನ ಅಂಗಳದಲ್ಲಿ ವಾಸಿಸಲು ಯೋಗ್ಯ ಮನೆಗಳ ನಿರ್ಮಿಸಲು ತಂತ್ರಜ್ಞಾನವನ್ನು ಸಿದ್ಧಪಡಿಸಬೇಕಿತ್ತು.

ಮಾಡಲಿಂಗ್ ಸಾಫ್ಟವೇರ್ ತಂತ್ರಜ್ಞಾನ: ಸ್ಪರ್ಧೆಯ ಮೂರನೇ ಹಂತಕ್ಕೆ ಆಯ್ಕೆಯ ಮೊದಲು ಅಂದರೇ ನಾಲ್ಕನೇ ಹಂತದಲ್ಲಿ 11 ತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ತಂಡಗಳು ಕಿರು ವಿಡಿಯೋಗಳ ಮೂಲಕ ತಮ್ಮ ತಂತ್ರಜ್ಞಾನವನ್ನು ಪರಿಚಯಿಸಬೇಕಿತ್ತು. ಮನೆ ನಿರ್ಮಾಣದ ನೀಲ ನಕ್ಷೆ, ಲೇಔಟ್, ಒಳಗಡೆಯ ತಂತ್ರಜ್ಞಾನವನ್ನು ವೀಕ್ಷಕರಿಗೆ (ತೀರ್ಪುಗಾರರು) ತಿಳಿಸಬೇಕಿತ್ತು. ಇಲ್ಲಿಯ ತೀರ್ಪುಗಾರರು ಎಲ್ಲ ತಂಡಗಳಿಗೆ ತಂತ್ರಜ್ಞಾನ, ವಿನ್ಯಾಸ, ಪ್ರಾಯೋಗಿಕವಾಗಿ ಎಷ್ಟು ಸರಿ, ಉಪಯುಕ್ತತೆ ಎಂಬಿತ್ಯಾದಿ ಅಂಶಗಳನ್ನು ಪರಿಶೀಲಿಸಿ ಅಂಕಗಳನ್ನು ನೀಡಿದೆ. ನ್ಯೂಯಾರ್ಕ್ ಮೂಲದ ‘ಸರ್ಚ್ ಪ್ಲಸ್/ಎಪಿಸ್ ಕಾರ್’ ತಮ್ಮ ವಿಭಿನ್ನ ತಂತ್ರಜ್ಞಾನವನ್ನು ಪ್ರಸ್ತುತ ಪಡಿಸುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದೆ. ಮಾಡ್ಯೂಲರ್ ವಿಜ್ಞಾನದ ತಂತ್ರಜ್ಞಾನ ಪಸ್ತುತಪಡಿಸಿದ್ದ ‘ಜಾಪರಹಾಂಸ್’ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು. ಮೊದಲ ಮೂರು ಸ್ಥಾನ ಪಡೆದ ತಂಡಗಳಿಗೆ ಬಹುಮಾನದ ಮೊತ್ತ 1 ಲಕ್ಷ ಡಾಲರ್ (69.35 ಲಕ್ಷ ರೂ) ಹಣವನ್ನು ಸಮಾನವಾಗಿ ಹಂಚಲಾಗಿದೆ. ಮತ್ತೊಂದು ಸುತ್ತು ಮೇ ತಿಂಗಳಲ್ಲಿ ಆರಂಭವಾಗಲಿದೆ. ವಿಜೇತ ತಂಡಗಳು ಈ ಹಂತದಲ್ಲಿ 3ಡಿ ಪ್ರಿಂಟ್ ಸ್ಕೇಲ್ ಮಾಡೆಲ್ ತಯಾರಿಸಲಿವೆ. ಈ ಸುತ್ತಿನಲ್ಲಿರುವ ತಂಡಗಳಿಗೆ 8 ಲಕ್ಷ ಡಾಲರ್ (5.55 ಕೋಟಿ ರೂ.) ಪ್ರೋತ್ಸಾಹ ಧನ ಸಿಗಲಿದೆ. ಈ ಸಂಶೋಧನೆ ಸಹಾಯದಿಂದ ಚಂದ್ರ ಮತ್ತು ಮಂಗಳ ಗ್ರಹ ಪ್ರವಾಸಕ್ಕೆ ಜನರನ್ನು ಕಳುಹಿಸಲು ಸಹಾಯಕಾರಿಯಾಗಲಿದೆ.

ಫ್ರೆಶ್ ನ್ಯೂಸ್

Latest Posts

Featured Videos