ಸಾಕು ನಾಯಿಯನ್ನೆ ಪ್ರೀತಿಸಿ ಮದುವೆ ಆದ ರೂಪದರ್ಶಿ

ಸಾಕು ನಾಯಿಯನ್ನೆ ಪ್ರೀತಿಸಿ ಮದುವೆ ಆದ ರೂಪದರ್ಶಿ

ಲಂಡನ್,ಆ.02: ವಿವಾಹವಾಗಲು ಸೂಕ್ತ ಸಂಗಾತಿ ಸಿಗದಕ್ಕಾಗಿ ತನ್ನ ಮುದ್ದಿನ ಸಾಕು ನಾಯಿಯನ್ನೆ ಮದುವೆಯಾದ ವಿಚಿತ್ರ ಘಟನೆಯೊಂದು ಲಂಡನ್ ನಲ್ಲಿ ನಡೆದಿದೆ.
ಸಾಮನ್ಯವಾಗಿ ಶ್ವಾನವನ್ನು ಮನೆಯ ಕಾವಲಿಗಾಗಿ ಹಾಗೂ ಪ್ರೀತಿಯ ನಂಬಿಕೆಯುಳ್ಳ ಪ್ರಾಣಿ ಇದಾಗಿದೆ ಆದರೆ ಇಲ್ಲಿ ನಡೆದಿರುವ ಘಟನೆಯೆಂದರೆ, ಇಂಗ್ಲೆಂಡ್ನ ಪ್ರಸಿದ್ಧ ರೂಪದರ್ಶಿ ಎಲಿಜಬೆತ್ ಹುಡ್ ಮದುವೆಗಾಗಿ ಯುವಕರೊಂದಿಗೆ ಡೇಟಿಂಗ್ ನಡೆಸಿದ್ದಾರೆ. ಆದರೆ ಅವರಿಗೆ ಸೂಕ್ತವಾದ ತಮ್ಮ ಇಚ್ಚೆಗೆ ತಕ್ಕಂತ ಬಾಳ ಸಂಗಾತಿ ಸಿಗದ ಹಿನ್ನಲೆ ತಾನು ಪ್ರೀತಿಯಿಂದ ಸಾಕಿದ ಲೋಗನ್ನನ್ನು (ನಾಯಿ) ಪ್ರೀತಿಸಿ ಮದುವೆಯಾಗಿದ್ದು ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ.
ಈ ವಿಚಿತ್ರ ಮದುವೆಯನ್ನು ಎಲಿಜಬೆತ್ ಚಾನೆಲ್ ನಲ್ಲಿ ಪ್ರಸಾರವಾಗಿದ್ದು ವಿಶ್ವದಾದ್ಯಂತ ಹಲವು ಮಂದಿ ಈ ವಿವಾಹವನ್ನು ವೀಕ್ಷಿಸಿ ಪರ, ವಿರೋಧ ಕಾಮೆಂಟ್ಸ್ಗಳನ್ನು ಕೂಡ ಮಾಡಿದ್ದಾರೆ. ವಿಚಿತ್ರವೆಂದರೆ ರೂಪದರ್ಶಿ ಎಲಿಜಬೆತ್ಗೆ 25 ವರ್ಷದ ಮಗನಿದ್ದು, ಈ ಮದುವೆಯ ಬಗ್ಗೆ ಪ್ರತಿಕ್ರಿಯಿಸಿರುವ ಅವನು ನನ್ನ ತಾಯಿ ಸಂಸಾರದ ಸುಖವನ್ನು ಈಗಾಗಲೇ ಅನುಭವಿಸಿದ್ದಾರೆ, ಈಗ ತಮ್ಮ ಇಳಿವಯಸ್ಸಿನಲ್ಲಿ ಸಂಗಾತಿಗಾಗಿ ಬಯಸಿದ್ದು ಅದಕ್ಕಾಗಿ ತಮ್ಮ 6 ವರ್ಷದ ಮುದ್ದು ನಾಯಿಮರಿಯೊಂದಿಗೆ ವಿವಾಹವಾಗಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾನೆ.
ಮದುವೆಯ ದಿನ ಪ್ರೀತಿಯ ನಾಯಿಮರಿ `ಲೋಗನ್’ ರಿಸ್ಟ್ ಬ್ಯಾಂಡ್ ಧರಿಸಿದ್ದರೆ, ಎಲಿಜಬೆತ್ ವೆಡ್ಡಿಂಗ್ ರಿಂಗ್ ಧರಿಸಿದ್ದಳು ಈ ಮದುವೆಗೆ ತುಂಬಾ ಆಪ್ತರಾದ 20 ಮಂದಿಯನ್ನು ಮಾತ್ರ ಆಹ್ವಾನಿಸಲಾಗಿತ್ತು.
ಇಂತಹ ಮದುವೆ ಮಾಡಿಕೊಂಡಿರುವ ನನಗೆ ಹುಚ್ಚು ಹಿಡಿದಿದೆ ಎಂದು ಜನರು ಹೇಳುತ್ತಿದ್ದರಾದರೂ ಮದುವೆಯಾಗಲು ಸೂಕ್ತ ಸಂಗಾತಿಗಾಗಿ ಕಳೆದ 8 ವರ್ಷಗಳಿಂದ ಆರು ವೆಬ್ ಸೈಟ್ ಗಳಲ್ಲಿ 200ಕ್ಕೂ ಹೆಚ್ಚು ಯುವಕರೊಂದಿಗೆ ಡೇಟಿಂಗ್ ಮಾಡಿದ್ದೇನಾದರೂ ಅವರ ಜೊತೆಗಿನ ಅನುಭವ ಸರಿ ಕಾಣದ ಕಾರಣ ಲೋಗನ್ನನ್ನು ಪ್ರೀತಿಸಿ ಮದುವೆಯಾಗಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos