ಮರಾಠಿ ಸಿನಿಮಾಗೆ ನಟ ಅಮಿತಾಭ್ ಬಚ್ಚನ್ ಎಂಟ್ರಿ

ಮರಾಠಿ ಸಿನಿಮಾಗೆ ನಟ ಅಮಿತಾಭ್ ಬಚ್ಚನ್ ಎಂಟ್ರಿ

ಮುಂಬೈ, ಸೆ. 7 : ಬಾಲಿವುಡ್ ದಿಗ್ಗಜ ನಟ ಅಮಿತಾಭ್ ಬಚ್ಚನ್ 76ರ ಇಳಿ ವಯಸ್ಸಿನಲ್ಲೂ ಹಲವು ಸಿನಿಮಾಗಳಲ್ಲಿ ನಟಿಸುತ್ತ ಸದಾ ಸಕ್ರಿಯರಾಗಿದ್ದಾರೆ. ಈ ವರ್ಷ ಅವರು ನಟಿಸಿರುವ ಮೂರು ಸಿನಿಮಾಗಳು ತೆರೆ ಕಂಡರೆ, ಇನ್ನೂ ಅವರ ಕೈಯಲ್ಲಿ 8 ಚಿತ್ರಗಳಿವೆ! ಜತೆಗೆ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದಲ್ಲೂ ಬಿಜಿಯಾಗಿದ್ದಾರೆ. ಇಂಥ ಬಿಡುವಿಲ್ಲದ ಶೆಡ್ಯೂಲ್ನಲ್ಲೂ ಅಮಿತಾಭ್ ಮರಾಠಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
ಹೌದು ಈ ಸಲ ಹೊಸ ಪ್ರಯೋಗಕ್ಕೆ ಇಳಿದಿರುವ ಅಮಿತಾಭ್ ‘ಎಬಿ ಆನಿ ಸಿಡಿ’ ಶೀರ್ಷಿಕೆಯ ಮರಾಠಿ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರದಲ್ಲಿ ಅಮಿತಾಭ್ ಸಮಕಾಲೀನ ಅನುಭವಿ ನಟ ವಿಕ್ರಮ್ ಗೋಖಲೆ ಕೂಡ ನಟಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos