ಮಂಗಳಗಿರಿಯಲ್ಲಿ ಮಂಗಳಮುಖಿ ಕಣಕ್ಕೆ

ಮಂಗಳಗಿರಿಯಲ್ಲಿ ಮಂಗಳಮುಖಿ ಕಣಕ್ಕೆ

ಅಮರಾವತಿ, ಮಾ, 26, ನ್ಯೂಸ್ ಎಕ್ಸ್ ಪ್ರೆಸ್: 2019ರ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಸಿನಿಮಾ ತಾರೆಯರು ಮತ್ತು ಕ್ರಿಕೆಟಿಗರ ಸರದಿ ಮುಗಿಯಿತು, ಈಗ ಮಂಗಳಮುಖಿಯೊಬ್ಬರು ಲೋಕಸಭಾ ಚುನಾವಣೆಯ ಕಣಕ್ಕಿಳಿದಿದ್ದಾರೆ.

ಆಂಧ್ರಪ್ರದೇಶದ ಮಂಗಳಗರಿ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸಿಂಹಾದ್ರಿ ತಮನ್ನಾ ಎಂಬ ಮಂಗಳಮುಖಿ ಮಂಗಳಗಿರಿ ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಿದ್ದು, ಇದೇ ಕ್ಷೇತ್ರದಲ್ಲಿ ಆಂಧ್ರಪದೇಶ ಸಿಎಂ ಚಂದ್ರಬಾಬು ನಾಯ್ಡು ಪುತ್ರನಾದ ನಾರಾ ಲೋಕೇಶ್ ಟಿಡಿಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಅಲ್ಲದೇ ವೈಎಸ್ಆರ್ ಕಾಂಗ್ರೆಸ್ನ ಅಭ್ಯರ್ಥಿಯಾಗಿ ರಾಮಕೃಷ್ಣ ರೆಡ್ಡಿ ಕಣಕ್ಕಿಳಿದಿದ್ದಾರೆ. ಇದೀಗ ಈ ನಾಯಕರ ಎದುರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಮಂಗಳಮುಖಿ ಸಿಂಹಾದ್ರಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಿಂಹಾದ್ರಿ ತಮನ್ನಾ, ಚುನಾವಣೆ ಎದುರಿಸುವುದಕ್ಕೆ ಭಾರತದ ಮೊದಲ ಮಂಗಳಮುಖಿ ಶಾಸಕಿಯಾಗಿರುವ ಶಬನಮ್ ಮೌಸಿಯವರೇ ನನಗೆ ಪ್ರೇರಣೆ ಅಂತಾ ಹೇಳಿದ್ದಾರೆ.

ಅಲ್ಲದೇ ನನಗೆ ತಂದೆ-ತಾಯಿ ಯಾರು ಇಲ್ಲ. ನಾನು ಸನ್ಯಾಸಿನಿ. ಒಂದು ವೇಳೆ ನಾನು ಚುನಾವಣೆಯಲ್ಲಿ ಗೆದ್ದರೆ, ದಿನದ 24ಗಂಟೆಯೂ ಜನರಿಗಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಈಗಾಗಲೇ ನನಗೆ ಬೇರೆ ಬೇರೆ ಪಕ್ಷಗಳು ನಮ್ಮ ಪಕ್ಷದಿಂದ ಸ್ಪರ್ಧಿಸಿ ಅಂತಾ ಅವಕಾಶ ಕೊಡುತ್ತಿವೆ. ಅವನೆಲ್ಲಾ ನಾನು ತಿರಸ್ಕರಿಸಿದ್ದೇನೆ. ಹಣ ಹಾಗೂ ದರ್ಪದ ರಾಜಕೀಯದ ವಿರುದ್ಧ ಹೋರಾಡುವುದೇ ನನ್ನ ಗುರಿ ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos