ಸರ್ಕಾರಿ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಿ

ಸರ್ಕಾರಿ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಿ

ಹನೂರು: ಸಾರ್ವಜನಿಕರು ಸರ್ಕಾರಿ ಇಲಾಖೆಗಳ ವತಿಯಿಂದ ದೊರೆಯುವ ಹಲವಾರು ಸೌಲಭ್ಯಗಳನ್ನು ಸದುಪಯೊಗಪಡಿಸಿಕೊಳ್ಳುವಂತೆ ಡಿಜಿಟಲ್ ಎಂಪವರ್‌ಮೆಂಟ್ ಸಂಸ್ಥೆ, ಸ್ಮಾರ್ಟ್ ಪುರ್ ಯೋಜನೆಯ ಯೋಜನಾಧಿಕಾರಿ ಹಾಗೂ ಪತ್ರಕರ್ತರಾದ ಕುಮಾರ ದೊರೆ ಹೇಳಿದರು.
ಹನೂರು ತಾಲ್ಲೂಕಿನ ಪಳನಿಮೇಡು ಗ್ರಾಮದ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಸರ್ಕಾರಿ ಇಲಾಖೆಗಳ ಸೌಲಭ್ಯ ಕುರಿತ ಕಾರ್ಯಗಾರದಲ್ಲಿ ಮಾತನಾಡುತ್ತಾ ಹಲವಾರು ಸರಕಾರಿ ಇಲಾಖೆಗಳ ಸೌಲಭ್ಯಗಳ ಮಾಹಿತಿ ಕೊರತೆ, ಜನರಿಗಿದ್ದು ಇದನ್ನು ಸಾರ್ವಜನಿಕರಿಗೆ ಮುಟ್ಟಿಸುವಲ್ಲಿ ಕೆಲವೊಮ್ಮೆ ಅಧಿಕಾರಿಗಳ ಪಾತ್ರ ದೊಡ್ಡದಿದೆ ಎಂದರು.
ಇಲಾಖಾ ಅಧಿಕಾರಿಗಳನ್ನು ಕಾರ್ಯಗಾರಕ್ಕೆ ಆಹ್ವಾನಿಸಲಾಗಿದ್ದು ಅದರಂತೆ ಸಾರ್ವಜನಿಕರಿಗೆ ಮತ್ತು ರೈತರಿಗೆ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಪಡೆದುಕೊಂಡು ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಪಳನಿಮೇಡು ಗ್ರಾಮದ ಬಹುತೇಕ ಜನರು ಪ್ಲೋರ್ ಮ್ಯಾಟ್ ಮಾಡುತ್ತಿದ್ದು, ಸಹಕಾರ ಸಂಘ ಮಾಡಿಕೊಂಡರೆ ಹೆಚ್ಚಿನ ಅನುಕೂಲ ಪಡೆದುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ, ಸಹಕಾರ ಇಲಾಖೆ , ಶಿಕ್ಷಣ ಇಲಾಖೆ, ಬ್ಯಾಂಕ್‌ಗಳಿಂದ ದೊರೆಯುವ ಸೌಲಭ್ಯ ಕುರಿತಂತೆ ಮಾಹಿತಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಿಬ್ಬಂಧಿಗಳಾದ ಕುಮಾರ, ಜಯಪ್ಪ, ಶಿಕ್ಷಕ ವೆಂಕಟೇಶ್, ರಾಮಾಪುರ ಗ್ರಾಪಂ ಎಸ್.ಡಿ.ಎ ಅಂತೋಣಿಸ್ವಾಮಿ, ಡಿಜಿಟಲ್ ಎಂಪವರ್‌ಮೆಂಟ್ ಸಂಸ್ಥೆ, ಸ್ಮಾರ್ಟ್ ಪುರ್ ಯೋಜನೆಯ ಸಿಬ್ಬಂದಿಗಳಾದ ಮುನಿಸ್ವಾಮಿ, ಮಾಧುರಿ, ಪ್ರಭಾಕರ್, ಅರ್ಜುನ್ ಮುಂತಾದವರು ಹಾಜರಿದ್ದರು

ಫ್ರೆಶ್ ನ್ಯೂಸ್

Latest Posts

Featured Videos