ಮಹಾರಾಷ್ಟ್ರದ ರೈತರ ಕಾಲ್ನಡಿಗೆ ಜಾಥಾಕ್ಕೆ ಮಹಾನ್ ವಿಜಯ

ಮಹಾರಾಷ್ಟ್ರದ ರೈತರ ಕಾಲ್ನಡಿಗೆ ಜಾಥಾಕ್ಕೆ ಮಹಾನ್ ವಿಜಯ

ಮುಂಬೈ: ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬರುವುದಕ್ಕೂ ಮುನ್ನ ನೀಡಿದ್ದ ಆಶ್ವಾಸನೆಗಳು ಹುಸಿಯಾಗಿವೆ ಎಂದು ಆರೋಪಿಸಿ ನಡೆಸುತ್ತಿದ್ದ ಮಹಾರಾಷ್ಟ್ರದ ರೈತರ ಕಾಲ್ನಡಿಗೆ ಜಾಥಾಕ್ಕೆ ಮಹಾನ್ ವಿಜಯವಾಗಿದೆ.

ನಿನ್ನೆ ಪ್ರಾರಂಭವಾದ ಜಾಥಾ ಇಂದು ಎರಡನೇ ದಿನಕ್ಕೆ ಕಾಲಿಟ್ಟಿತ್ತು. 2ನೇ ದಿನಕ್ಕೆ ರೈತರ ಮಹಾ ಜಾಥಾಕ್ಕೆ ಮಹಾರಾಷ್ಟ್ರ ರಾಜ್ಯ ಸರ್ಕಾರ ಮಣಿದು ಸಂಧಾನಕ್ಕೆ ಮುಂದಾಗಿದೆ.

‘ಕಿಸಾನ್ ಲಾಂಗ್ ಮಾರ್ಚ್’ ಹೆಸರಿನ ಈ ಪ್ರತಿಭಟನೆಯನ್ನು ‘ಆಲ್ ಇಂಡಿಯಾ ಕಿಸಾನ್ ಸಭಾ (ಎಐಕೆಎಸ್)’ ಹಮ್ಮಿಕೊಂಡಿದೆ. ಬೆಳೆ ವಿಮೆ ಯೋಜನೆಗಳ ಜಾರಿ, ಭೂ ಹಕ್ಕು, ಕನಿಷ್ಠ ಬೆಂಬಲ ಬೆಲೆ, ಸುಧಾರಿತ ನೀರಾವರಿ ಯೋಜನೆ ಮತ್ತು ಬರದಿಂದ

ಎಲ್ಲ ಬೇಡಿಕೆ ಈಡೇರಿಸುವುದಾಗಿ ರಾಜ್ಯ ಸರ್ಕಾರ ಲಿಖಿತ ಭರವಸೆ:

ತುರ್ತು ಪರಿಹಾರಕ್ಕಾಗಿ ಬೇಡಿಕೆ ಇಟ್ಟು ಭಾರೀ ಸಂಖ್ಯೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಸಂಘರ್ಷಕ್ಕಿಳಿದಿದ್ದರು.

ಎಲ್ಲ ಬೇಡಿಕೆ ಈಡೇರಿಸುವುದಾಗಿ ಮಹಾರಾಷ್ಟ್ರ ರಾಜ್ಯ ಸರ್ಕಾರ ಲಿಖಿತ ಭರವಸೆ ನೀಡಿದೆ. ಪ್ರತೀ 2 ತಿಂಗಳಿಗೊಮ್ಮೆ ಭರವಸೆಗಳ ಜಾರಿಯ ಪ್ರಗತಿ ಬಗ್ಗೆ ವಿಮರ್ಶಾ ಸಭೆ ನಡೆಸಲು ಒಪ್ಪಿಗೆ ನೀಡಲು ಕೂಡಾ ಸರ್ಕಾರ ಭರವಸೆ ನೀಡಿದೆ.

ಕಿಸಾನ್ ಲಾಂಗ್ ಮಾರ್ಚ್ ವಾಪಾಸ್:

ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸಕಸಲು ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಕಿಸಾನ್ ಲಾಂಗ್ ಮಾರ್ಚ್ ಕಾರ್ಯಕ್ರಮವನ್ನು ರೈತರು ಕೈಬಿಟ್ಟಿದ್ದಾರೆ. ನಾಸಿಕ್ ನಿಂದ ಮುಂಬೈ ತನಕ ಸುಮಾರು 180 ಕಿ.ಮೀ. ದೂರದ ತನಕ ತೆರಳಿದ ಈ ಮೆರವಣಿಗೆಯಲ್ಲಿ 1 ಲಕ್ಷ ಸಂಖ್ಯೆಯ ರೈತರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ವಿಜಯೋತ್ಸವ ಆಚರಿಸಲು ನಿರ್ಧಾರ:

ಕಾಲ್ನಡಿಗೆ ಜಾತಾದಲ್ಲಿ ರೈತರು ಭಾಗವಹಿಸುವುದನ್ನು ತಡೆಯಲು, ಜಾಥಾದ ಆರಂಭಕ್ಕೆ ಅನುಮತಿ ನಿರಾಕರಿಸಿ, ಕಿಸಾನ್ ಸಭಾದ ಮಹಾರಾಷ್ಟ್ರ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಯನ್ನು ಬಂಧಿಸಿದರೂ ರೈತರು ಭಾಗವಹಿಸುವುದನ್ನು ತಪ್ಪಿಸಲು ಆಗಲಿಲ್ಲ.

ಇಡೀ ರಾಜ್ಯದಲ್ಲಿ ರೈತರು ಮಾತ್ರವಲ್ಲದೆ ಇತರ ಜನರೆಲ್ಲರ ನಡುವೆ ಸರ್ಕಾರದ ವಿರುದ್ಧ ಸಿಟ್ಟು ಭುಗಿಲೇಳುವುದರಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ಸಂಧಾನಕ್ಕಿಳಿದು ಒಪ್ಪಂದಕ್ಕೆ ಬರಲಾಯಿತು. ಈ ಬಗ್ಗೆ ಸ್ವತಃ ಅಖಿಲ ಭಾರತ ಕಿಸಾನ್ ಸಭಾದ ಅಧ್ಯಕ್ಷ ಡಾ.ಅಶೋಕ್ ಧವಲೆಯವರು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

https://twitter.com/DrAshokDhawale/status/1098797173649461250

ಫ್ರೆಶ್ ನ್ಯೂಸ್

Latest Posts

Featured Videos