ಪರಿಹಾರ ಮಾಡಲು ಸ್ಥಳ ವೀಕ್ಷಣೆ ಮಾಡಿದ : ರಾಠೋಡ್

ಪರಿಹಾರ ಮಾಡಲು ಸ್ಥಳ ವೀಕ್ಷಣೆ ಮಾಡಿದ : ರಾಠೋಡ್

ಚಿಂಚೋಳಿ: ತಾಲ್ಲೂಕಿನ ವ್ಯಾಪಾರ ಉದ್ದಿಮೆಗಾಗಿ ಹೆಸರುವಾಸಿಯಾದ ಸೇಡಮ್ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಸುಲೇಪೇಟ ಗ್ರಾಮದ ಮುಖ್ಯರಸ್ತೆಯಿಂದ ಸರ್ಕಾರಿ ಬಾಲಕಿಯರ ಪ್ರೌಡ ಶಾಲೆಗೆ ಹಾಗೂ ಕೆ.ಇ.ಬಿ ಕಂದಾಯ ನಾಡ ಕಚೇರಿಗೆ ಉರ್ದು ಶಾಲೆಗೆ ಮುಸ್ಲಿಂ ಬಾಂಧವರ ಖಬರಸ್ಥಾನಕ್ಕೆ ಮೈನಾರಿಟಿ ಕಾಲೇಜು ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಮಳೆಯಿಂದ ನೀರು ನಿಂತು ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಶಾಸಕರಿಗೆ ಮೋರ್ಚಾ ಸಂಘಟನೆಯ ಪದಾಧಿಕಾರಿಗಳು ಗ್ರಾಮಸ್ಥರು ಮನವಿ ಮಾಡಿದರು.

ಕ್ಯಾರೆ ಅನ್ನದ ಜಿಲ್ಲಾಡಳಿತ ಆದರೆ ಗುರುವಾರ ದೀಡಿರನೆ ಚಿಂಚೋಳಿ ತಾಲ್ಲೂಕಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಅನೀಲಕುಮಾರ ರಾಠೋಡ್ ರವರು ಭೇಟಿ ನೀಡಿ ಪಕ್ಕದಲ್ಲಿ ಕಲ್ರ್ಬುಗಿ ರಸ್ತೆ ಇರುವುದರಿಂದ ನಾನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ಮಾಡುತ್ತೇನೆಂದು ಹೇಳಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಂಡೆಪ್ಪಾ ದನ್ನಿ ಸಹಾಯಕ ಯೋಜನಾ ಅಧಿಕಾರಿ ಶಂಕರ ರಾಠೋಡ್, ಮಾರುತಿ ಗಂಜಗಿರಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮೋರ್ಚಾ ಸಂಘಟನೆ, ಗ್ರಾ.ಪಂ.ಸದಸ್ಯರಾದ ಹಾಜಪ್ಪಾ ಗಂಜಗಿರಿ, ಪಕ್ರೊದ್ದಿನ್, ಮಹ್ಮದ್ ಪಟೇಲ್, ಇನ್ನಿತರರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos