ವಿದೇಶಿಗರ ಕನ್ನಡ ಪ್ರೀತಿ, ಮೈಮೇಲೆ ಕನ್ನಡದ ಹಚ್ಚೆ.!

ವಿದೇಶಿಗರ ಕನ್ನಡ ಪ್ರೀತಿ, ಮೈಮೇಲೆ ಕನ್ನಡದ ಹಚ್ಚೆ.!

ಮೈಸೂರು, ನ. 01: ಇಂದು ಎಲ್ಲೆಲ್ಲೂ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಕೇವಲ ಕನ್ನಡಿಗರಷ್ಟೇ ಅಲ್ಲದೇ, ಇದೀಗ ವಿದೇಶಿ ಪ್ರಜೆಗಳು ಕೂಡಾ ಕನ್ನಡಕ್ಕೆ ಮನಸೋತಿದ್ದಾರೆ. ವಿದೇಶಿ ಪ್ರಜೆಗಳು ಕನ್ನಡ ಪ್ರೇಮ ಮೆರೆದಿದ್ದಾರೆ. ಅಮೆರಿಕಾ, ಸ್ವೀಡನ್, ಜಪಾನ್ ಸೇರಿದಂತೆ ಹಲವು ವಿದೇಶಿಗರು ಕನ್ನಡ ಪ್ರೇಮ ತೋರಿಸಿದ್ದಾರೆ. 2 ವರ್ಷಗಳಲ್ಲಿ ಮೈಸೂರಿನ ಸುನಿಲ್ 40 ಜನರಿಗೆ ಕನ್ನಡದ ಟ್ಯಾಟೂ ಹಾಕಿದ್ದಾರಂತೆ.

ವಿಶೇಷ ಅಂದ್ರೆ, ಕನ್ನಡ ಪದಗಳ ಟ್ಯಾಟೂಗಳ ಮೇಲೆ ವಿದೇಶಿಗರು ಸಾಕಷ್ಟು ಒಲವಿದೆ. ಹೀಗಾಗಿ ಸುನಿಲ್ ಹತ್ತಿರ ಸಾಕಷ್ಟು ವಿದೇಶಿಗರು ಕನ್ನಡ ಟ್ಯಾಟೂ ಹಾಕಿಸಿಕೊಳ್ಳಲು ಬರುತ್ತಾರೆ. ಇಲ್ಲಿಗೆ ಬರುವ ವಿದೇಶಿಗರು ಕನ್ನಡ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ.

ಅಮೆರಿಕದ ಜಾಯ್ ಬೇನ್ ತೋಳಿನ ಮೇಲೆ ‘ನನ್ನ ಸ್ವೀಟ್ ಎಮಿ’ ಕನ್ನಡ ಪದವಿರುವ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ. ಇನ್ನು ವಿದೇಶಿ ಮಹಿಳೆ ಮೈ ಮೇಲೆ ‘ನಮಸ್ತೆ’ ಕನ್ನಡ ಪದ ಕಂಡು ಬಂದಿದೆಈ ಮೂಲಕ ಸುನಿಲ್ ಟ್ಯಾಟೂ ಮೂಲಕ ಕನ್ನಡದ ಹಿರಿಮೆ ಹೆಚ್ಚಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos