ಮುಳ್ಳಯ್ಯನಗಿರಿ ಬೆಟ್ಟದ ಸೊಬಗು ನೋಡಿ

ಮುಳ್ಳಯ್ಯನಗಿರಿ ಬೆಟ್ಟದ ಸೊಬಗು ನೋಡಿ

  ಚಿಕ್ಕಮಗಳೂರು, ಅ. 30: ಮುಳ್ಳಯ್ಯನಗಿರಿ ಕರ್ನಾಟdಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಬಾಬಾ ಬುಡನ್ಗಿರಿ ಬೆಟ್ಟಸಾಲಿನಲ್ಲಿರುವ ಒಂದು ಶಿಖರ. 1930 ಮೀಟರ್ (6317 ಅಡಿ) ಎತ್ತರದಲ್ಲಿರುವ ಮುಳ್ಳಯ್ಯನ ಗಿರಿ ಕರ್ನಾಟಕದ ಅತ್ಯುನ್ನತ ಪರ್ವತಶಿಖರವಾಗಿದೆ. ಅಲ್ಲದೆ ಇದು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಣ ಪ್ರದೇಶದಲ್ಲಿನ ಅತಿ ಎತ್ತರದ ಪರ್ವತವು ಸಹ ಹೌದು.

ನೈಸರ್ಗಿಕ ಗುಹೆ:  ಬೆಟ್ಟದ ಮೇಲ್ಬಾಗಕ್ಕೆ ಹೋಗಲು ರಸ್ತೆಯು ಇದೆ ಮತ್ತು ಚಾರಣ ಮಾಡಲು ಸರ್ಪದ ಹಾದಿ ಎನ್ನುವ ಮತ್ತೊಂದು ಕಾಲು ದಾರಿ ಕೂಡ ಇದೆ. ದೇವಾಲಯದಿಂದ ಸ್ವಲ್ಪ ಕೆಳಗೆ ಹೋದರೆ ಎರಡು ನೈಸರ್ಗಿಕ ಗುಹೆಗಳಿವೆ. ಇವುಗಳಲ್ಲಿ ತೆರಳಿದರೆ ಮುಳ್ಳಯ್ಯ ಸ್ವಾಮಿಗಳ ದೇವಾಲಯದ ಗರ್ಭ ಗುಡಿಯವರೆಗೆ ಹೋಗುತ್ತದೆ ಎಂದು ಪ್ರತೀತಿ.

ರಾಜ್ಯದ ಅತಿ ಎತ್ತರ ಶಿಖರ: ಮುಳ್ಳಯ್ಯನಗಿರಿ ರಾಜ್ಯದ ಅತಿ ಎತ್ತರ ಶಿಖರ. ಬೆಟ್ಟಗುಡ್ಡಗಳ ಪಾಲಿನ ದೊಡ್ಡಣ್ಣ. ಬರೋಬ್ಬರಿ ಎತ್ತರ ಸಮುದ್ರ ಮಟ್ಟದಿಂದ 1926 ಮೀಟರ್. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಇರುವ ದೂರ 18 ಕಿ.ಮೀ. ಪುರಾತನ ಇತಿಹಾಸ ಇರುವ ಮುಳ್ಳಯನ ಗದ್ದುಗೆ, ಈಶ್ವರ ದೇವರು ಇರುವ ಸ್ಥಳ. ಧಾರ್ಮಿಕ ಹಾಗು ಪ್ರಾಕೃತಿಕ ನೆಲೆವೀಡು. ಅಂಡು-ಡೊಂಕಿನ ಕಡಿದಾದ ಹಾದಿ. ಒಂದೆಡೆ ಕಾಫಿಯ ಕಣಿವೆ, ಇನ್ನೊಂದೆಡೆ ಒಂದಷ್ಟು ಗಿಡ-ಮರಗಳು.

3ಜರಿ ಸಸ್ಯ, ಬಣ್ಣಬಣ್ಣದ ಚಿಗುರುಗಳಿಂದ ಲಾಸ್ಯ ಆಡುವ ಗಿಡಗಳು. ಒಟ್ಟಿನಲ್ಲಿ ಕಣ್ತುಂಬ ಚೆಲುವು. ಗುಂಡಿ ಗೊಟರುಗಳಿಲ್ಲದ ಸುಗಮ ಹಾದಿ. ಅಲ್ಲಲ್ಲಿ ಸಿಗುವ ತಿರುವುಗಳಲ್ಲಿ ಒಂದಷ್ಟು ಹೊತ್ತು ನಿಂತು ನೋಡಿದರೆ ಕಣ್ಣು ಕುಕ್ಕುವ ಸೌಂದರ್ಯ. ಕ್ಷಣ ಕ್ಷಣವೂ ಹೊಸ ಅನುಭವ. ಮುಳ್ಳಯ್ಯನಗಿರಿಗೆ ಯವಾಗ ಬಂದರೂ ನಿರಾಶೆ ಆಗುವುದಿಲ್ಲ. ಅಲ್ಲಿನ ಸೊಬಗೇ ಹಾಗೆ ಮುಂಗಾರಿನ ಈ ದಿನಗಳಲ್ಲಿ ಈ ದೊಡ್ಡಣ್ಣನ ಸೊಬಗೇ ವಿಸ್ಮಯ.

5 ಚಳಿ ಮೈನಡುಗಿಸುತ್ತದೆ. ಮಂಜು ತೋಯ್ದು ತೊಪ್ಪೆ ಮಡುತ್ತದೆ. ಬೆಚ್ಚನೆ ಉಡುಪು ಇದ್ದವರು ಹೊದ್ದು ಕೊಂಡು ರಕ್ಷಣೆ ಪಡೆದರೆ ಇಲ್ಲದವರು ಅಂ ನಾವೂ ತರಬೇಕಿತ್ತು ಎಂದು ಕೊಳ್ಳುತ್ತಾರೆ. ಅದೂ ಒಂಥರಾ ಖುಷಿಯ ಕ್ಷಣ. ಎತ್ತ ನೋಡಿದರತ್ತ ಬೆಳ್ನೊರೆ. ದಟ್ಟ ಹೊಗೆ ಆವರಿಸಿದಂತೆ. ಗಾಳಿಯ ಚಲನಕ್ಕೆ ಅನುಗುಣವಾಗಿ ಚಲಿಸುತ್ತಾ, ದಿಕ್ಕು ಬದಲಿಸುತ್ತಾ, ಕೆಲವೊಮ್ಮೆ ತೆಳುವಾಗಿ ಕ್ಷಣಾರ್ಧದಲ್ಲಿ ದಟ್ಟವಾಗುವ ಮಂಜಿನ ನೃತ್ಯ ಮನಮೋಹಕ.

ಸೌಂದರ್ಯಕ್ಕೆ ಕಳಶ ಇಟ್ಟಂತೆ: ಸೌಂದರ್ಯಕ್ಕೆ ಕಳಶ ಇಟ್ಟಂತೆ ನೆಲದಾಳದಿಂದ ಹೊರ ಬಂದು ನಗುತ್ತಾ ನಿಂತ ಹೂಗಳು, ಹುಲ್ಲಿನ ಹಾಸಿನ ಮೇಲೆ ಮಂಜಿನ ಮುತ್ತುಗಳು. ಕಷ್ಟಪಟ್ಟು ನೂರಾರು ಮೆಟ್ಟಿಲು ಏರಿದರೂ ಸೆಕೆ ಎನ್ನುವುದಿಲ್ಲ. ಬಿರುಗಾಳಿಗೆ ಮೈಕೊರೆಯುವ ಛಳಿ, ಕೂಲ್-ಕೂಲ್. ಎತ್ತ ನೋಡಿದರೂ ಒಂದೇ ದೃಶ್ಯ.

ಮುಳ್ಳಯನಗಿರಿ ಮುಂಗಾರಿನಲ್ಲಿ ಮಾತ್ರ ಚೆಲುವನ್ನು ಹೊದ್ದು ನಿಂತಿರುವುದಿಲ್ಲ. ಎಲ್ಲಾ ಋತುಗಳಲ್ಲೂ ಅದು ಸಂಭ್ರಮಿಸುತ್ತಿರುತ್ತದೆ. ಮೋಡ, ಮಂಜು ಇಲ್ಲದಾಗ ಶುಭ್ರ ಪರಿಸರ. ಕ್ಷಣಮಾತ್ರದಲ್ಲಿ ಬದಲಾವಣೆ. ಮೋಡ, ಮಂಜು ಕರಗಿ ಸುತ್ತಲ ವೈಯಾರ ಅನಾವರಣ ಆಗುತ್ತದೆ. ಸುತ್ತಲ ಹಚ್ಚ ಹಸಿರಿನ ಪರಿಸರ, ಅಂಕು ಡೊಂಕಿನ ಹಾದಿ, ಎದುರಿಗೆ ನಿಲ್ಲುವ ಬಂಡೆಗಳು ಹೀಗೆ ಎಲ್ಲದನ್ನು ನೋಡಬಹುದು.

ಫ್ರೆಶ್ ನ್ಯೂಸ್

Latest Posts

Featured Videos