ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಈಗಾಗಲೇ ಕಳೆದ (ಶುಕ್ರವಾರ ಸೆ.27) ರಂದು ಎಫ್ಐಆರ್ ದಾಖಲಾಗಿದ್ದು, ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು ಇಂದಿನಿಂದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಭರ್ಜರಿ ಚುರುಕಿನ ತನಿಖೆಯನ್ನು ಆರಂಭಿಸಿದ್ದಾರೆ.
ಹೌದು, ಮೈಸೂರು ಲೋಕಾಯುಕ್ತ ಎಸ್‌ಪಿ ಟಿ.ಜೆ ಉದೇಶ್ ನೇತೃತ್ವದ ನಾಲ್ಕು ತನಿಖಾ ತಂಡಾ ಶನಿವಾರವೇ ಚೆಕ್‌ಲಿಸ್ಟ್ ರೆಡಿ ಮಾಡಿಕೊಂಡು ತನಿಖೆಗಿಳಿದಿದೆ. ಆರಂಭಿಕ ಹಂತದಲ್ಲಿ ದಾಖಲೆ ಸಂಗ್ರಹಕ್ಕೆ ಮುಂದಾಗಿದೆ. 59 ಭಾಗಗಳಾಗಿ ದಾಖಲೆಗಳನ್ನ ವಿಂಗಡಿಸಲಾಗಿದೆ. ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿರೋ 3ಎಕರೆ 16 ಗುಂಟೆ ಜಮೀನಿನ ಮೂಲ ದಾಖಲೆ ಸಂಗ್ರಹದಲ್ಲಿ ಅಧಿಕಾರಿಗಳು ತೊಡಗಿದ್ದಾರೆ. 1935ರಿಂದ ಹಿಡಿದು, 2021ರವರೆಗೆ ಸಿಎಂ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ಹಂಚಿಕೆಯಾಗೋವರೆಗೂ ಇರೋ ಡಾಕ್ಯೂಮೆಂಟ್ಸ್‌ಗಳನ್ನ ಕಲೆಹಾಕಲಾಗುತ್ತಿದೆ.
ಇನ್ನು ಇಂದಿನಿಂದ ಕೇವಲ ದಾಖಲೆಗಳನ್ನ ಮಾತ್ರ ಸಂಗ್ರಹಿಸಲಾಗುತ್ತೆ. ನೂರಾರು ದಾಖಲೆ ಪ್ರತಿಯನ್ನ ಮುಡಾ ಕಚೇರಿ, ತಹಶೀಲ್ದಾರ್ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿ ದೂರುದಾರಿಂದಲೂ ದಾಖಲೆಗಳ ಕಲೆಹಾಕಲಾಗುತ್ತೆ. ನಂತರ ದೂರುದಾರರಿಂದ ಲೋಕಾಯುಕ್ತ ಪೊಲೀಸರು ಮಾಹಿತಿ ಕೇಳಲಿದ್ದಾರೆ. ಪ್ರಮುಖವಾಗಿ 2 ಆಯಾಮದಲ್ಲಿ ದಾಖಲೆ ಪಡೆಯಲಿರುವ ಪೊಲೀಸರು, ಮೊದಲ ಆಯಾಮದಲ್ಲಿ ಜಮೀನು ವಾರಸುದಾರನಿಗೆ ಸಂಬಂಧಪಟ್ಟ ಡಾಕ್ಯೂಮೆಂಟ್ಸ್‌ಗಳು, ಎರಡನೇ ಆಯಾಮದಲ್ಲಿ ಸಿಎಂ ಮತ್ತು ಸಿಎಂ ಪತ್ನಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿಗೆ ಸಂಬಂಧಿಸಿದ ಪತ್ರಗಳನ್ನ ಸಂಗ್ರಹಿಸಲು ಲೋಕಾಯುಕ್ತ ಪೊಲೀಸರು ನಿರ್ಧರಿಸಿದ್ದಾರೆ. ನಂತರ ಆರೋಪಿಗಳ ವಿಚಾರಣೆ ನಡೆಯಲಿದೆ.
ಆದ್ದರಿಂದ ಸದ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸದ್ಯಕ್ಕೆ ಲೋಕಾಯುಕ್ತ ಟೆನ್ಶನ್ ಇಲ್ಲದಂತಾಗಿದೆ.