ಲಾಕ್ ಡೌನ್ ಆಯ್ತು ಸೀಲ್ ಡೌನ್ ಅಸ್ತ್ರ

ಲಾಕ್ ಡೌನ್ ಆಯ್ತು ಸೀಲ್ ಡೌನ್ ಅಸ್ತ್ರ

ಬೆಳಗಾವಿ, ಏ. 10 : ಪೊಲೀಸ್ ರಿಗೆ ವಾರ್ನಿಂಗ್ ಕೊಟ್ಟು ಸಾಕಾಗಿದೆ. ಜನರು ಹೊರಗೆ ಬರುವುದನ್ನು ತಡೆಯಲು ಇದೀಗ್ ಸೀಲ್ ಡೌನ್ ಅಸ್ತ್ರ ಪ್ರಯೋಗಿಸಿದ್ದಾರೆ. ಸೀಲ್ ಡೌನ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ 10 ಜನರಿಗೆ ಕೊರೊನಾ ಹಿನ್ನಲೆ ಬೆಳಗಾವಿ ಜಿಲ್ಲೆಯೂ ಕಂಪ್ಲೀಟ್ ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಳಗಾವಿ ಸಂಪೂರ್ಣ ಲಾಕ್ ಡೌನ್ ಮಾಡಲಾಗಿತ್ತು. ಆದರೂ ಆದಕಾರಣ ಬೆಳಗಾವಿ ಜಿಲ್ಲೆಯೂ ಕಂಪ್ಲೀಟ್ ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಬೆಳಗಾವಿ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ತುರ್ತು ಸೇವೆಗಳ ವಾಹನಗಳಿಗೆ ಮಾತ್ರ ನಗರಕ್ಕೆ ಪ್ರವೇಶ ನೀಡಲಾಗುತ್ತಿದೆ. ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದು, ಪ್ರತಿಯೊಂದು ವಾಹನ ಪರಿಶೀಲಿಸಿ ಬಿಡುತ್ತಿದ್ದಾರೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos