ಲಾಕ್ ಡೌನ್ ಬಳಿಕ ಬಾಲಕ ಮಾಡಿದ್ದೇನು.?

ಲಂಡನ್, ಏ.13 : ದಿನವೂ ವಾಕಿಂಗ್ ಗೆ ಹೋದಾಗ ರಸ್ತೆಯಲ್ಲಿ ಓಡಾಡುವ ಜನರಿಗೆ ಹಾಯ್, ಗುಡ್ ಮಾರ್ನಿಂಗ್ ಎಂದು ಹೇಳಿ ಖುಷಿ ಪಡುತ್ತಿದ್ದ 3 ವರ್ಷದ ಬಾಲಕ ರಾಲ್ಫ್, ಲಾಕ್ ಡೌನ್ ಬಳಿಕ ಖಾಲಿ ರಸ್ತೆಯಲ್ಲಿ ಗುಡ್ ಮಾರ್ನಿಂಗ್ ಹೇಳುತ್ತ ತೆರಳುತ್ತಿದ್ದಾನೆ.
ಕರೋನಾ ವೈರಸ್ ಇದ್ದಕ್ಕಿದ್ದಂತೆ ನಗರಗಳನ್ನು ಖಾಲಿ ಮಾಡಿಬಿಟ್ಟಿದೆ. ವಾಕಿಂಗ್ ಮಾಡುವವರಿಲ್ಲ…ಆಟ ಆಡುವವರಿಲ್ಲ. ಬ್ರಿಟನ್(ಯುಕೆ) ನಲ್ಲೂ ರೋಗದಿಂದ ಹಲವರು ಆಸ್ಪತ್ರೆ ಸೇರಿದ್ದರೆ, ಲಾಕ್ಡೌನ್ ನಿಂದ ಎಲ್ಲರೂ ಮನೆಯಲ್ಲೇ ಕುಳಿತಿದ್ದಾರೆ.
ಯಾರೂ ಇಲ್ಲದಿದ್ದರೂ ಎಲ್ಲರೂ ಇದ್ದಾರೆ ಎಂದುಕೊಂಡು ಕಾಲ್ಪನಿಕವಾಗಿ ಶುಭೋದಯ ಹೇಳುತ್ತ ಓಡಾಡುವ ವಿಡಿಯೋ ವೈರಲ್ ಆಗಿದೆ. ಬಾಲಕನ ಸಂಬಂಧಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos