ಸಹಕಾರ ಸಂಘಗಳು ಬಡವರನ್ನು ಮೇಲೆತ್ತುವ ಒಂದು ರೀತಿಯ ಅಕ್ಷಯ ಪಾತ್ರೆ ಇದ್ದಂತೆ

ಸಹಕಾರ ಸಂಘಗಳು ಬಡವರನ್ನು ಮೇಲೆತ್ತುವ ಒಂದು ರೀತಿಯ ಅಕ್ಷಯ ಪಾತ್ರೆ ಇದ್ದಂತೆ

ತಿಪಟೂರು, ಜ. 17:  ಶ್ರೀ ಗುರು ಮಲ್ಲಿಕಾರ್ಜುನ ಸ್ವಾಮಿ ವಿವಿಧೋದ್ದೇಶ ಸಹಕಾರ ಸಂಘ ನಿ.ದ ನೂತನ ಕಟ್ಟಡವನ್ನು ತಮಡಿ ಹಳ್ಳಿ ಮಠದ ಶ್ರೀ ಶ್ರೀ ಶ್ರೀ ಡಾ. ಅಭಿನವ ಮಲ್ಲಿಕಾರ್ಜುನ ದೇಶಿ ಕೇಂದ್ರ  ಮಹಾಸ್ವಾಮೀಜಿಯವರು ಉದ್ಘಾಟಿಸಿದರು.

ಇದೇ ವೇಳೆ ಅಧ್ಯಕ್ಷೀಯ ನುಡಿಯನ್ನು ಮಾತನಾಡಿದ ಅವರು ಸಹಕಾರ ಸಂಘಗಳು ಬಡವರನ್ನು ಮೇಲೆತ್ತುವ ಒಂದು ರೀತಿಯ ಅಕ್ಷಯ ಪಾತ್ರೆ ಇದ್ದಂತೆ, ಇಂತಹ ಅಕ್ಷಯ ಪಾತ್ರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲೆ ಇದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬ ನಾಗರಿಕರು ಬಳಸಿಕೊಂಡು ಆರ್ಥಿಕವಾಗಿ ಮುನ್ನಡೆಸುವಂತಹ ಪರಿಸ್ಥಿತಿ ನಮ್ಮ ಸಮಾಜದಲ್ಲಿ ನಿರ್ಮಾಣವಾಗಬೇಕೆಂದು ಇದೇ ವೇಳೆ ಅವರು ಕರೆ ನೀಡಿದರು.

ಸಹಕಾರ ಸಂಘಗಳು ಸಹಕಾರ ಮನೋಭಾವನೆಯಿಂದ ಹುಟ್ಟಿದ್ದು ಅಂತಹ ಸಹಕಾರ ಸಂಘಗಳಲ್ಲಿ ಯಾವುದೇ ಲೋಪದೋಷವಾಗದಂತೆ ನಡೆಸಿಕೊಂಡು ಹೋಗುವಂತಹ ಜವಾಬ್ದಾರಿ ಆಡಳಿತ ಮಂಡಳಿಯ ಮೇಲಿದ್ದು ಪ್ರತಿಯೊಬ್ಬರು ತಾವು ನಿರ್ವಹಿಸುವ ಕೆಲಸವನ್ನು ದೇವರು ಮೆಚ್ಚುವಂತಿರಬೇಕು ಎಂದು ಇದೇ ವೇಳೆ ಅವರು ತಿಳಿಸಿದರು.

ಹನಿ ಹನಿಗೂಡಿದರೆ ಹಳ್ಳ ತೆನೆ ತೆನೆ ಗೂಡಿದರೆ ಬಳ್ಳ ಎನ್ನುವಂತೆ ಸಹಕಾರ ಸಂಘಗಳು ಒಂದು ರೂಪಾಯಿಯಿಂದ ಇಂದು ಕೋಟಿ ರೂಪಾಯಿವರೆಗೆ ತನ್ನ ವಹಿವಾಟನ್ನು ನಡೆಸುತ್ತಿದ್ದು, ಕೆಲವೊಂದು ಸಹಕಾರ ಸಂಘಗಳು ಇಂದು ಬ್ಯಾಂಕುಗಳಿಗೂ ಕೂಡ ಸವಾಲೊಡ್ಡುವಂತೆ ಬೆಳೆದಿರುವುದು ಸತ್ಯಕ್ಕಿಡಿದ ಕೈಗನ್ನಡಿಯಂತೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಬಿ ಎಸ್ ಬಸವರಾಜಪ್ಪ ಸಹಕಾರ ಸಂಘದ ನಿರ್ದೇಶಕರಾದ ಶಿವಣ್ಣ, ರಾಜಶೇಖರಯ್ಯ,ಯೋಗಾನಂದ್, ತಿಮ್ಮೇಗೌಡ, ಈಶ್ವರಪ್ಪ, ಬಸವರಾಜು, ಸುರೇಶ್, ಶಿವಗಂಗಮ್ಮ, ಅನಸೂಯಾ, ಚಂದ್ರಶೇಖರ್, ಚಿಕ್ಕಯ್ಯ, ತಿಮ್ಮರಾಯರಾಮಯ್ಯ,  ಹಾಗೂ ಕಾರ್ಯದರ್ಶಿ ದೇವರಾಜು ಸಿಬ್ಬಂದಿ ವರ್ಗದವರಾದ ಮಧು, ಉಮಾ ಪ್ರಸಾದ್, ಮಧು.  ಕಾಂತರಾಜು ಮೊದಲಾದವರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos