ಜಗದ ಉದ್ದಗಲಕ್ಕೆ ಕನ್ನಡ ಉಳಿಯಲಿ ಬೆಳೆಯಲಿ

ಜಗದ ಉದ್ದಗಲಕ್ಕೆ ಕನ್ನಡ ಉಳಿಯಲಿ ಬೆಳೆಯಲಿ

ಹುಬ್ಬಳ್ಳಿ, ಜ. 23: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಸಚಿವ ಸಿ,ಟಿ,ರವಿ ಲಂಡನ್ನಿನ ಥೇಮ್ಸ್ ನದಿಯ ದಂಡೆಯ ಮೇಲೆ ಇರುವ ಬಸವ ಪುತ್ಥಳಿಗೆ ಭೇಟಿ ಮಾಡಿ ಶ್ರೀಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಿದ್ದಾರೆ.

ಇದೇ ವೇಳೆ ಮಾತನಾಡಿ, 12 ನೇ ಶತಮಾನದಲ್ಲಿ ಸಾಮಾಜಿಕ ಸುಧಾಕಾರನಾಗಿ ಧ್ವನಿ ಇಲ್ಲದವರಿಗೂ ಧ್ವನಿಕೊಟ್ಟು ಅನುಭವ ಮ಼ಂಟಪದ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದಂತ ಪ್ರಜಾಪ್ರಭುತ್ವವಾದಿ ಬಸವಣ್ಣನವರು ಇಲ್ಲಿ ಪ್ರತಿಮೆ ರೂಪದಲ್ಲಿರುವದು ಸಂಕೇತ ಮಾತ್ರ-ಆ ಮೂಲಕ ಬಸವಣ್ಣನವರ ತತ್ವ ಸಂದೇಶಗಳನ್ನು ಪ್ರಚಾರ ಮಾಡುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.

ಡಾ.ನೀರಜ್ ಪಾಟೀಲ ಅವರು ಲಂಡನ್ನಿನಲ್ಲಿ ಬಸವ ಪುತ್ಥಳಿ ಸ್ಥಾಪಿಸುವದಕ್ಕೆ ಪೂರ್ಣ ಪ್ರಮಾಣದ ಪ್ರಯತ್ನ ಮಾಡಿದ್ದು, ನನಗೆ ಹೆಮ್ಮೆಯನಿಸುತ್ತಿದೆ. ಆದ್ದರಿಂದ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು. ಬಸವಣ್ಣನವರ ನೆಲದಿಂದ ಬಂದಿದ್ದೇವೆ ಅನ್ನುವದು ಹೆಮ್ಮೆಯ ಸಂಗತಿ.  ಬ್ರೀಟೀಷರು ನಮ್ಮ ವಸಹಾತುಗಳ ಮೂಲಕ ಆಳಿರಬಹುದು, ನಾವು ವಿಶ್ವಾಸದ ಮೂಲಕ ಜಗತ್ತನ್ನು ಜನರನ್ನು ಗೆಲ್ಲುವ ಮೂಲಕ ಅವರ ಮನಸ್ಸನ್ನು ಗೆಲ್ಲುವ ಮೂಲಕ ನಮ್ಮ ಪ್ರಭಾವವನ್ನು ಬೀರೊದಕ್ಕೆ ಸಾಧ್ಯವಿದೆ.

ಬಸವಣ್ಣನವರ ತತ್ವ ಜಗದಗಲಕ್ಕೆ ಪಸರಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಕೆಲಸ ಮಾಡುತ್ತಿದೆ. ಇಲ್ಲಿ 20 ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ನಿರಂತರವಾಗಿ ಕೆಲಸ ಮಾಡುತ್ತಾ ಸಕ್ರೀಯವಾಗಿ ಕನ್ನಡ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನದಲ್ಲಿ ತೋಡಗಿದ್ದೀರಿ ಎನ್ನುವಂತಹದ್ದು ಆನಂದದ ಸಂಗತಿ. ಜಗದ ಉದ್ದಗಲಕ್ಕೆ ಕನ್ನಡ ಉಳಿಯಲಿ ಬೆಳೆಯಲಿ ಎಂದು ಹಾರೈಸಿ ಮಾತನಾಡಿದರು. ಇದೇ ಸಂಧರ್ಭದಲ್ಲಿ ಲೋಕೇಶ, ರತ್ನಾಕರ, ರವೀಂದರ್ ಪಾಲ್ಗೊಂಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos