ಬಿಳಿ ಸಮವಸ್ತ್ರ ದಂತೆ ವಾತಾವರಣ ಸ್ವಚ್ಛವಿರಲಿ: ಹಿಟ್ಟಾಚಿ ಮಂಜು

ಬಿಳಿ ಸಮವಸ್ತ್ರ ದಂತೆ ವಾತಾವರಣ ಸ್ವಚ್ಛವಿರಲಿ: ಹಿಟ್ಟಾಚಿ ಮಂಜು

ಕೆಆರ್‌ಪುರ, ನ. 08: ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚಾಗಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಅಬೇಡ್ಕರ್ ನಗರ ಮುಖಂಡ ಸಮಾಜ ಸೇವಕ ಹಿಟ್ಟಾಚಿ ಮಂಜು ತಿಳಿಸಿದರು.

ರಾಮಮೂರ್ತಿನಗರ ವಾರ್ಡ್ನಅಂಬೇಡ್ಕರ್‌ ನಗರದ ಸಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆವರಣದಲ್ಲಿ ಪ್ರೌಢ ಶಾಲಾ ಮಕ್ಕಳಿಗೆ ಬಿಳಿ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.

ಬಿಳಿ ಬಟ್ಟೆ ಎಷ್ಟು ಸ್ವಚ್ಛವಾಗಿರುತ್ತೋಅದೇ ಮಾದರಿ ನಮ್ಮ ಮನಸ್ಸು, ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿರಬೇಕುಎಂದು ಹೇಳಿದರು. ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಉಪಯೋಗಿಸಿಕೊಂಡು ಸರ್ಕಾರಿ ಶಾಲಾ ಮಕ್ಕಳು ಅಭಿವೃದ್ಧಿಪತದತ್ತ ಸಾಗಬೇಕು ಎಂದು ಹೇಳಿದರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲು ಪ್ರತಿಭೆಅಡಗಿರುತ್ತದೆ ಆ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಶಿಕ್ಷಕರು, ಪೋಷಕರು ಮಾಡಬೇಕುಎಂದು ತಿಳಿಸಿದರು. ವಿದ್ಯಾರ್ಥಿಗಳು ಶಿಕ್ಷಕರು ಹೇಳಿಕೊಡುವ ಪಾಠವನ್ನ ಜೀವನದಲ್ಲಿ ಅಳವಡಿಸಿಕೊಂಡು ದೇಶಕ್ಕೆ ಕೀರ್ತಿತರುವ ಕೆಲಸ ಮಾಡಬೇಕು ಎಂದು  ಹೇಳಿದರು.

ಸರ್ಕಾರಿ ಶಾಲೆ ಯಾವ ಖಾಸಗಿ ಶಾಲೆಗೂ ಕಮ್ಮಿಇಲ್ಲ ಎಂಬಂತೆ ಅಬೆಡ್ಕರ್‌ನಗರ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗಾಗಿ ವ್ಯವಸ್ಥೆಯನ್ನು ಮಾಡಲಾಗಿದೆಎಂದರು. ಮಕ್ಕಳ ಸುರಕ್ಷತೆಗಾಗಿ ಸಿಸಿ ಕ್ಯಾಮೆರಾ, ಉತ್ತಮ ವಿದ್ಯೆ ಕಲಿಸುವ ಶಿಕ್ಷಕರು, ಪಠ್ಯೇತರ ಚಟುವಟಿಕೆಗಳು ಸೇರಿದಂತೆ ಶಾಲಾ ಆಕ್ಟಿವಿಟಿ ಸಕ್ರಿಯವಾಗಿಕಾರ್ಯ ನಿರ್ವಹಿಸುತ್ತಿದೆ ಎಂದರು.

ಅಂಬೇಡ್ಕರ್‌ ನಗರ ಹಿಟ್ಟಾಚಿ ಮಂಜು ಅವರು ಯಾವಜನ ಪ್ರತಿನಿಧಿಗೇನೂಕಮ್ಮಿ ಇಲ್ಲವೆಂಬಂತೆ ಸರ್ಕಾರಿ ಶಾಲೆ ದತ್ತುಪಡೆದುಕೊಂಡಂತೆ ಅಂಬೇಡ್ಕರ್‌ ನಗರ ಸರ್ಕಾರಿ ಶಾಲೆಯನ್ನು ನೋಡಿಕೊಳ್ಳುತ್ತಿದ್ದಾರೆ, ಯಾವುದೇ ಸಮಸ್ಯೆ ಬಂದರೂ ತಕ್ಷಣವಾಗಿ ನಿವಾರಿಸುವ ಶಕ್ತಿ ಅವರಲ್ಲಿದೆ.

ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢ ಶಾಲಾ ಮುಖ್ಯೋಪಧ್ಯಾಯರಾದ ಬಿ.ವಿ.ಭಾರತಿ, ದೈಹಿಕ ಶಿಕ್ಷಕರಾದ ಹರಿ, ಶಿಕ್ಷಕರಾದ ಪರಮೇಶ್, ಭಾರತಿ, ಸ್ಥಳೀಯರಾದ ನಾಗಲಕ್ಷ್ಮಿ, ಮುನಿಸ್ವಾಮಿ, ರಘು, ಲಕ್ಷ್ಮಿಪತಿ ಮತ್ತಿತರರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos