ಕೆಲಸ ಮಾಡಲು ಅವಕಾಶ ಕೊಡಿ

ಕೆಲಸ ಮಾಡಲು ಅವಕಾಶ ಕೊಡಿ

ಬೆಂಗಳೂರು,ಮೇ.12:ಕೊರೊನಾ ಬಂದಿರುವ ಹಿನ್ನಲೆ ದೇವಾಲಯಗಳಲ್ಲಿ ಕಷ್ಟ.ಮತ್ತೆ ದೇವಾಲಯಗಳನ್ನು ಪುನಾರಂಭ ಮಾಡಬೇಕೆಂದು ಅರ್ಚಕರು  ಸಿಎಂ ಗೆ  ಮನವಿ ಮಾಡಿದ್ದಾರೆ. ಅರ್ಚಕರು ಸಿಎಂ ಗೆ ಮನವಿ ಸಲ್ಲಿಸಿ, ಕಾಯಕವೇ ಕೈಲಾಸ ಎಂಬ ಮಾತು ಅರ್ಚಕರ ವಿಷಯದಲ್ಲಿ ಅಕ್ಷರ ಸತ್ಯ,  ತಿಂಗಳುಗಳಿಂದ ದೇವಾಲಯಗಳು ಬಂದ್ ಆಗಿರುವುದರಿಂದ ತಮ್ಮ ಜೀವನ ನಿರ್ವಹಣೆ ಕಷ್ಟವಾಗಿದೆ ಹೀಗಾಗಿ ಮತ್ತೆ  ದೇವಾಲಯಗಳನ್ನು ಪುನಾರಂಭ ಮಾಡಬೇಕೆಂದರು.

ಮುಜರಾಯಿ ಇಲಾಖೆ ವ್ಯಾಪ್ತಿಗೆ ಸುಮಾರು 34 ಸಾವಿರ ದೇವಾಲಯಗಳು ಒಳಪಟ್ಟಿದ್ದು, ಅದರಲ್ಲಿ ಎ ಗುಂಪಿನಲ್ಲಿ 175,  ಬಿ ಗುಂಪಿನಲ್ಲಿ 158, ಉಳಿದವೆಲ್ಲಾ ಸಿ ಗುಂಪಿಗೆ ಸೇರಲಿವೆ. ಇನ್ನು ಹಲವು ದೇವಾಲಯಗಳನ್ನು ಟ್ರಸ್ಟ್ ಗಳು ಮತ್ತು ಸಂಘ ಸಂಸ್ಥೆಗಳು ನಡೆಸುತ್ತಿವೆ. ಎ ಮತ್ತು ಬಿ ಗುಂಪಿನ ದೇವಾಲಯಗಳ ಅರ್ಚಕರಿಗೆ ತಿಂಗಳ ವೇತನ ಸಿಗಲಿದೆ,. ಆದರೆ ಸಿ ಗುಂಪಿನ ದೇವಾಲಯಗಳ ಅರ್ಚಕರು ದೇವಾಲಯಗಳಿಗೆ ಬರುವ ಭಕ್ತರು ನೀಡುವ ಕಾಣಿಕೆ ಮೇಲೆ ಅವರ ಆದಾಯ ಅವಲಂಬಿಸಿದೆ. ಹೀಗಾಗಿ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos