ಕೊರೋನಾ  ಜೊತೆಗೆ ಕಲಿಕೆ: ಲಿಂಬಾವಳಿ

ಕೊರೋನಾ  ಜೊತೆಗೆ ಕಲಿಕೆ: ಲಿಂಬಾವಳಿ

ಮಹದೇವಪುರ, ಮೇ . 18 : ಕೊರೋನಾ ವೈರಸ್ ಜೊತೆಗೆ ಬದುಕುವುದನ್ನು ಪ್ರತಿಯೊಬ್ಬರು ಕಲಿಯಬೇಕಾದ ಅನಿವಾರ್ಯವಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು. ಕ್ಷೇತ್ರದ ಕಾಟಂನಲ್ಲೂರು ಸಮೀಪ ಹಾಲು ಒಕ್ಕೂಟ ಹಾಗೂ ಬಮೂಲ್ ಕಲ್ಯಾಣ ಟ್ರಸ್ಟ್ವತಿಯಿಂದ ಹಾಲು ಉತ್ಪಾದಕರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಆಶಾ ಕಾರ್ಯಕರ್ತೆಯರಿಗೆ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಸಭೆ ಸಮಾರಂಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಇನ್ನೂ ಹತೋಟಿಗೆ ಬರದ ಕೊರೋನಾ ಸಾಂಕ್ರಾಮಿಕ ರೋಗದ ಜೊತೆ ಬದುಕುವುದನ್ನು ಕಲಿಯಬೇಕು ಎಂದರು. ಆಯುಶ್ ಇಲಾಖೆ ಹೊರಡಿಸಿರುವ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಆಶಾ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ ದಬ್ಬಾಳಿಕೆ ಅಕ್ಷಮ್ಯ ಅಪರಾಧ ಅವರು ಕೊರೋನಾ ದಂತಹ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಹೊರಟ ಮಾಡುತ್ತಿದ್ದಾರೆ. ಇವರ ಕಾರ್ಯ ಶ್ಲಾಘನೀಯ ಎಂದು ಕೃತಜ್ಞತೆ ಸಲ್ಲಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳು ಕೃಷಿ ಮತ್ತು ಹೈನುಗಾರಿಕೆಯಲ್ಲಿ ತಂತ್ರಜ್ಞಾನ ವೈಜ್ಞಾನಿಕತೆಯನ್ನು ಅಳವಡಿಸಿ ಹೊಸ ಹೂಸ ಅವಿಷ್ಕಾರ ಮಾಡುವ ಮೂಲಕ ದೇಶದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು,

ಫ್ರೆಶ್ ನ್ಯೂಸ್

Latest Posts

Featured Videos