ನಾಯಕರ ದುರಹಂಕಾರವೇ ಕಾರಣ 

ನಾಯಕರ ದುರಹಂಕಾರವೇ ಕಾರಣ 

ಮಂಗಳೂರು, ಡಿ. 09 : ಉ.ಪ.ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಕಾಂಗ್ರೆಸ್ ನಾಯಕರ ದುರಹಂಕಾರವೇ ಕಾರಣವೆಂದು ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಜನಾರ್ಧನ ಪೂಜಾರಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ತಾವು ತೋರಿದ್ದ ದುರಹಂಕಾರಕ್ಕೆ ಸರಿಯಾಗಿ ಅನುಭವಿಸಿದ್ದಾರೆ ಎಂದ ಪೂಜಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರತ್ತೆ, ನಾವು ಸಾಯುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.
“ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದಾಗ ಕಾಂಗ್ರೆಸ್ ತಾನು ಮಾಡಿದ ತಪ್ಪೇನು ಎಮ್ದು ಅರಿವಾಗುತ್ತದೆ.ಕಾಂಗ್ರೆಸ್ ಮುಖಂಡರ ದುರಹಂಕಾರವೇ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ. ದುರಹಂಕಾರದಿಂದ ಬಿಜೆಪಿಯನ್ನು ತಡೆಯಲು ಸಾಧ್ಯವಿಲ್ಲ” ಅವರು ಅಭಿಪ್ರಾಯ ಪಟ್ಟಿದ್ದಾರೆ.
“ನಾನು ಪಕ್ಷದ ನಾಯಕರೆದುರು ಕೈಮುಗಿದು ಕಣ್ಣೀರು ಸುರಿಸಿ ಕೇಳಿದರೂ ಅವರು ಅರ್ಥ ಮಾಡಿಕೊಂಡಿಲ್ಲ, ನನ್ನ ಮಾತು ಕೇಳಿಲ್ಲ. ದುರಹಂಕಾರ ಬಿಡಿ ಎಂದರೂ ಯಾರೂ ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ, ಈಗ ಅವರು ಅನುಭವಿಸುತ್ತಿದ್ದಾರೆ.ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಏರುತ್ತೆ, ನಾವು ಸಾಯುತ್ತೇವೆ” ಜನಾರ್ಧನ ಪೂಜಾರಿ ವಿಷಾದ ವ್ಯಕ್ತಪಡಿಸಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos