ಸಾರ್ವಜನಿಕರು ಸರ್ಕಾರಿ ಆಸ್ಪತ್ರೆ ಸೌಲಭ್ಯ ಸದ್ಭಳಕೆಗೆ ಶಾಸಕ ಕರೆ

ಸಾರ್ವಜನಿಕರು ಸರ್ಕಾರಿ ಆಸ್ಪತ್ರೆ ಸೌಲಭ್ಯ ಸದ್ಭಳಕೆಗೆ ಶಾಸಕ ಕರೆ

ಬೊಮ್ಮನಹಳ್ಳಿ, ಮಾ. 14: ವಿಶೇಷವಾಗಿ ಹೆರಿಗೆ ಮತ್ತು ಇನ್ನಿತರ ಎಲ್ಲ ರೀತಿಯ ಸುಸಜ್ಜಿತ  ಸೌಲಭ್ಯಗಳುಳ್ಳ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಮಾರ್ಪಾಟು ಮಾಡಿ ನೂತನ ಕಟ್ಟಡವನ್ನುಇಂದು ಉದ್ಘಾಟನೆಯ ಮಾಡುವ ಮೂಲಕ ಲೋಕಾರ್ಪಣೆ ಮಾಡಲಾಯಿತು ಎಂದು ಬೊಮ್ಮನಹಳ್ಳಿ ವಿದಾನಸಭಾ ಸದಸ್ಯ ಸತೀಶ್ ರೆಡ್ಡಿ ತಿಳಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೊಮ್ಮನಹಳ್ಳಿ ವಲಯ ಅರಿಕೆರೆ ವಾರ್ಡ್ ನಂಬರ್ 193 ನಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ಸತೀಶ್ ರೆಡ್ಡಿಯವರು ಉದ್ಘಾಟನೆ ಮಾಡಿ ಮಾತನಾಡಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ದ್ಯೇಯದೊಂದಿಗೆ ಆಸ್ಪತ್ರೆಯನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡುವುದರ ಜತೆಯಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಆಸ್ಪತ್ರೆಗೆ ಕಲ್ಪಸಲಾಗಿದೆ ಎಂದು ತಿಳಿಸಿದರು.

ಹರಿಕೆರೆ ಗ್ರಾಮದಲ್ಲಿರುವ ಸದರಿ ಆಸ್ಪತ್ರೆಯನ್ನು ಈ ಹಿಂದೆ ದಾನಿಗಳಾದ ಸೂರ್ಯಪ್ಪ ಮತ್ತು ಕುಟುಂಬದ ವತಿಯಿಂದ ನೀಡಿರುವ ನಿವೇಶನ ಜಾಗದಲ್ಲಿ ಇದ್ದ ಹಳೆ ಆಸ್ಪತ್ರೆ ಕಟ್ಟಡವನ್ನು ನವೀಕರಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ನೂತನ ಕೊಠಡಿಗಳು ಹಾಗೂ ವೈದ್ಯಕೀಯ ತಪಾಸಣ ಯಂತ್ರಗಳನ್ನು ಅಳವಡಿಸಿ ಉತ್ತಮ ಚಿಕಿತ್ಸೆಗೆ ಪೂರಕ ವಾತಾವರಣ ಕಲ್ಪಿಸಲಾಗಿದೆ ಎಂದು ಶಾಸಕ ಸತೀಶ್ ರೆಡ್ಡಿ ತಿಳಿಸಿದರು. ಸಾರ್ವಜನಿಕರು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆನೀಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾರ್ವಜನಿಕರು ಮತ್ತು ಮಹಿಳೆಯರಿಗಾಗಿ ಉತ್ತಮ ಆರೋಗ್ಯ ಸೇವೆಗಳನ್ನು ಕಲ್ಪಿಸಲು ಹಲವು ವಿನೂತನ ಆರೋಗ್ಯ ಸೇವೆಗಳನ್ನು ಜಾರಿಗೊಳಿಸಿದ್ದು, ಪ್ರತಿಯೊಬ್ಬರು ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಈ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹಾನಗರಪಾಲಿಕೆ ವಾರ್ಡ್ ನಂಬರ್ 193 ಸದಸ್ಯರಾದ ಭಾಗ್ಯ ಮುರಳಿ ಹಾಗೂ ಮಾಜಿ ನಗರಸಭಾ ಸದಸ್ಯ ಮುರಳಿ ಹಾಗೂ ಸಮಾಜ ಸೇವಕರಾದ ಸೂರ್ಯಪ್ಪ ಮುಂತಾದ ಸ್ಥಳೀಯ ಬಿಜೆಪಿ  ಮುಖಂಡರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos