ಲಂಕಾ ಗಾಯಕಿಯ ಕನ್ನಡ ಸಾಂಗ್ ಗೆ ಫೀದಾ!

ಕೊಲಂಬೊ, ಅ.1 : ಕನ್ನಡ ಚಿತ್ರ ಗೀತೆಗಳನ್ನು ಹಾಡಲು ಬಾಲಿವುಡ್, ಕಾಲಿವುಡ್ ಸಿಂಗರ್ಗಳನ್ನು ಕನ್ನಡ ಸಂಗೀತ ನಿರ್ದೇಶಕರು ಕರೆಸಿಕೊಳ್ಳುತ್ತಾರೆ. ಅವರಲ್ಲಿ ಹಲವರ ಮಾಧುರ್ಯಕ್ಕೆ ಕನ್ನಡಿಗರು ಸಹಾ ತಲೆದೂಗಿದ್ದಾರೆ. ಆದರೀಗ ಸಪ್ತಸಾಗರದಾಚೆಯು ಸದ್ದು ಮಾಡಿದ್ದ ‘ಕೆಜಿಎಫ್’ ಚಿತ್ರದ ಗೀತೆಯೊಂದು ವೈರಲ್ ಆಗಿದೆ. ಇದಕ್ಕೆ ಮುಖ್ಯ ಕಾರಣ ಈ ಕನ್ನಡ ಹಾಡಿಗೆ ಕಂಠದಾನ ಮಾಡಿರುವುದು ಶ್ರೀಲಂಕಾದ ಗಾಯಕಿ ಎಂಬುದು. ಲಂಕಾ ಗಾಯಕಿ ಹನ್ಸಿನಿ ವಿಮಲ್ಸಿರಿ ‘ಕೆಜಿಎಫ್’ ಸಿನಿಮಾದ ಅಮ್ಮನ ಮಮತೆಯನ್ನು ಹಾಡಿಹೊಗಳುವ ಹಾಡನ್ನು ಹಾಡಿ ಎಲ್ಲರ ಗಮನ ಸೆಳೆದಿದ್ದಾರೆ. ‘ಗರ್ಭದಿ ನನ್ನಿರಿಸಿ..’ ಹಾಡನ್ನು ತಮ್ಮ ಇಂಪಾದ ಧ್ವನಿಯೊಂದಿಗೆ ಹಾಡಿದ ಹನ್ಸಿನಿ ಅದನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಕೋಕ್ ಸ್ಟುಡಿಯೋ ಮಾದರಿಯಲ್ಲಿ ಲಂಕಾದಲ್ಲಿ ಮೂಡಿ ಬರುತ್ತಿರುವ Ambient Luxe Season 1 ನಲ್ಲಿ ಈ ಹಾಡನ್ನು ಹಾಡಲಾಗಿದ್ದು, ಇದೀಗ ಲಂಕನ್ ಗಾಯಕಿಯ ಮಾಧುರ್ಯಕ್ಕೆ ಕನ್ನಡಗಿರು ಫಿದಾ ಆಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos