ಕುಚ್ಚಿಕು ಸಾಂಗ್ ರೀಮಿಕ್ಸ್..?!

ಕುಚ್ಚಿಕು ಸಾಂಗ್ ರೀಮಿಕ್ಸ್..?!

ಬೆಂಗಳೂರು, ಡಿ. 09 : ಸಾಂಗ್ಗಳಿಗೆ ಸರಿಸಾಟಿಯೇ ಇರೋದಿಲ್ಲ, ದಶಕ ದಶಕಗಳೇ ಕಳೆದರು, ಇವತ್ತಿಗೂ ಆ ಕೆಲ ಹಾಡುಗಳನ್ನು ಕೇಳುಗ ಆನಂದಿಸುತ್ತಲೇ ಇರ್ತಾನೆ. ಗೆಳೆಯರ ಬಳಗದಲ್ಲಿ ಹಾಡೋ ಫ್ರೆಂಡ್ಶಿಪ್ ಸಾಂಗ್ ಕುಚ್ಚಿಕು ಕುಚ್ಚಿಕು ಸಾಂಗ್ ಮಗದೊಮ್ಮೆ ಸಿನಿಮಾದಲ್ಲಿ ಬಳಕೆಯಾಗ್ತಿದೆ.
‘‘ಕುಚ್ಚಿಕು ಕುಚ್ಚಿಕು , ನಾನ್ ಚಡ್ಡಿ ದೋಸ್ತು ಕಣೋ ಕುಚ್ಚಿಕು, ಈ ದೋಸ್ತಿ ಮೇಲೆ ಕೋಪವೇನು ಕುಚ್ಚಿಕು’’. ನಾದಬ್ರಹ್ಮ ಹಂಸಲೇಖರ ಸಂಗೀತ-ಸಾಹಿತ್ಯದ ಎಸ್.ಪಿ.ಬಾಲಸುಬ್ರಮಣ್ಯಂ ಸಿರಿಕಂಠದ ಈ ಗೀತೆಯನ್ನ ಎಲ್ಲಿ ಕೇಳಿದರು ಕಿವಿ ನಿಮಿರುತ್ತದೆ, ಮನಸು ಮಿಡಿಯುತ್ತದೆ. ಅಷ್ಟರ ಮಟ್ಟಿಗೆ ತಾಕತ್ತಿದೆ ಈ ಹಾಡಿಗೆ. ಅದ್ರಲ್ಲೂ ಅಂಬಿ-ವಿಷ್ಣು ಅಂತರಾಳದ ಅಭಿನಯವನ್ನು ನೋಡ್ತಿದ್ರಂತು ಎಂತವರ ಮನಸು ಕರಗಿ ಸ್ನೇಹಕ್ಕೆ ತಲೆಬಾಗುತ್ತದೆ. ಇಷ್ಟೆಲ್ಲ ಗಮ್ಮತ್ತಿರುವ ಹಾಡು ಈಗ ಮಗದೊಮ್ಮೆ ಸ್ಯಾಂಡಲ್ವುಡ್ ಬಿಗ್ ಸಿನಿಮಾವೊಂದರಲ್ಲಿ ಮರುಬಳಕೆ ಯಾಗುತ್ತಿದೆ. ಅದೂ ಸಹಸ್ರ ಸಹಸ್ರ ಅಭಿಮಾನಿಗಳ ಒಡೆಯ ದರ್ಶನ್ ಸಿನಿಮಾದಲ್ಲಿ ಅನ್ನೋದು ಸಕತ್ ಇಂಟ್ರಸ್ಟಿಂಗ್.
ಕುಚ್ಚಿಕು ಕುಚ್ಚಿಕು ಇದೊಂಥರ ಸ್ನೇಹಿತರ ಆ್ಯಂತಮ್ ಇದಂಗೆ. ಇಂತಹ ಹಾಡನ್ನು ಡಿ ಬಾಸ್ ನಟನೆಯ ರಾಬರ್ಟ್ ಸಿನಿಮಾದಲ್ಲಿ ಮರುಬಳಕೆಗೆ ವೇದಿಕೆ ಸಿದ್ದ ಪಡಿಸಿದ್ದಾರೆ ವೇರಿ ಟ್ಯಾಲೆಂಟೆಟ್ ಡೈರೆಕ್ಟರ್ವ ತರುಣ್ ಸುಧೀರ್. ಹಂಸಲೇಖ ಅವರ ಸಂಯೋಜಿಸಿದ ಈ ಕುಚ್ಚಿಕು ಕುಚ್ಚಿಕು ಹಾಡನ್ನು ರಿಮೇಕ್ಸ್ ಮಾಡಿಕೊಂಡು ರಾಬರ್ಟ್ ಸಿನಿಮಾದಲ್ಲಿ ಬಳಸಲು ಪ್ಲಾನ್ ನಡೆದಿದೆ. ಹಾಗಾದ್ರೆ ಸ್ನೇಹ ಜೀವಿ ದರ್ಶನ್ ಅವರ ಪಕ್ಕ ನಿಂತು ಕುಚ್ಚಿಕು ಎಂದು ಹಾಡೋರು ಯಾರು ಅನ್ನೋ ಪ್ರಶ್ನೆಗೆ ಉತ್ತರ ಮರಿ ಟೈಗರ್ ವಿನೋದ್ ಪ್ರಭಾಕರ್.

ಫ್ರೆಶ್ ನ್ಯೂಸ್

Latest Posts

Featured Videos