ಸವಾರರಿಗೆ ಕೋವಿಡ್ ಅರಿವು

ಸವಾರರಿಗೆ ಕೋವಿಡ್ ಅರಿವು

ದಾಸರಹಳ್ಳಿ: ರಾಷ್ಟ್ರೀಯ ಹೆದ್ದಾರಿ 4 ರ ಮಾದವರದ ಬಳಿ ಸಾರ್ವಜನಿಕರಿಗೆ ಕೊರೋನಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ದಾಸನಪುರ ಬಳಿಯ ಪ್ರಾದೇಶಿಕ ಸಾರಿಗೆ ಕಛೇರಿ ವತಿಯಿಂದ ಏರ್ಪಡಿಸಲಾಗಿತ್ತು.
ದಿನೇ ದಿನೇ ಸೋಂಕು ಹೆಚ್ಚುತಿರುವದರ ಬಗ್ಗೆ ಕಳವಳ ವ್ಯಕ್ತಪಡಿಸುತ್ತ, ಸಾರ್ವಜನಿಕರು ಸರ್ಕಾರ ಸೂಚಿಸುವ ಎಲ್ಲ ಸೂಚನೆಗಳನ್ನು ಪಾಲಿಸುತ್ತ ತಮ್ಮ ತಮ್ಮ ಕರ್ತವ್ಯವನ್ನು ಪಾಲಿಸಬೇಕು, ಸಾರ್ವಜನಿಕರಿಗೆ ಮಾಸ್ಕ್ ಉಪಯೋಗದ ಬಗ್ಗೆ ಅರಿವುನ್ನು ಸಾರಿಗೆ ಇಲಾಖೆಯ ಹಿರಿಯ ಮೋಟಾರು ನಿರೀಕ್ಚಕ ಡಾ.ಡಿ ಎಸ್. ಧನ್ವಂತರಿ ಒಡೆಯರ್ ಅರಿವು ಮೂಡಿಸಿದರು.
ಜೊತೆಗೆ ವಾಹನ ಸವಾರರಿಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಕಷಾಯ, ಚೂರ್ಣವನ್ನು ಸಾರ್ವಜನಿಕರಿಗೆ ವಿತರಿಸದರು.
ಇನ್ನೂ ಪ್ರತಿ ನಿತ್ಯಹೊರಗಿನಿಂದ ಬಂದಾಗ ಕೈ ಕಾಲುಗಳನ್ನು ತೊಳೆಯುವುದು. ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವುದು ಇದರಿಂದ ಆಗುವ ಪ್ರಯೋಜನಗಳ ಬಗ್ಗೆ ಡಾ.ಒಡೆಯರ್ ವಾಹನ ಸವಾರರಿಗೆ ವಿವರಿಸಿದರು. ಇದೇ ವೇಳೆಯಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos