ಕೊಹ್ಲಿ ಸಿನಿಮಾದಲ್ಲಿ ನಟಿಸ್ತಾರಂತೆ!

ಕೊಹ್ಲಿ ಸಿನಿಮಾದಲ್ಲಿ ನಟಿಸ್ತಾರಂತೆ!

ಮುಂಬೈ, ಮೇ. 19 : ಕ್ರಿಕೆಟ್ ನಲ್ಲಿ ತಮ್ಮ ಮಿಂಚಿನ ಬ್ಯಾಟಿಂಗ್ ಮೂಲಕ ಎದುರಾಳಿಗಳಲ್ಲಿ ನಡುಕ ಹುಟ್ಟಿಸುವ ಬಲಗೈ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ. ಅಭಿಮಾನಿಗಳಿಗೆ ಮೈದಾನದಲ್ಲಿ ರಂಜಿಸಿದ ವಿರಾಟ್ ಈಗ ಮತ್ತೆ ಬೆಳ್ಳಿ ತೆರೆ ಮೇಲೆ ಅಭಿಮಾನಿಗಳನ್ನು ರಂಜಿಸಲು ಸಖತ್ ಪ್ಲ್ಯಾನ್ ಮಾಡುತ್ತಿದ್ದಾರೆ.
ಸದ್ಯಕ್ಕೆ ಈಗ ಭಾರತದ ಹಲವು ಕ್ರಿಕೆಟಿಗರ ಜೀವನಗಾಥೆ ಸಿನಿಮಾವಾಗಿ ಮೂಡಿಬಂದಿದೆ. ಆದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಯಾರೂ ಇದುವರೆಗೆ ಸಿನಿಮಾ ಮಾಡಿಲ್ಲ. ಒಂದು ವೇಳೆ ತಮ್ಮ ಆತ್ಮಕತೆ ಸಿನಿಮಾವಾದರೆ ಅಲ್ಲಿ ನಾನೇ ನಾಯಕನಾಗಿ ನಟಿಸುತ್ತೇನೆ ಎಂದಿದ್ದಾರೆ ಕೊಹ್ಲಿ. ಆದರೆ ನಾಯಕಿ ಮಾತ್ರ ಅನುಷ್ಕಾ ಶರ್ಮಾ ಆಗಿರಬೇಕೆಂದು ಷರತ್ತು ವಿಧಿಸಿದ್ದಾರೆ.
ಛೆಟ್ರಿ ಜತೆಗಿನ ಸಂವಾದ : ಸುನಿಲ್ ಛೆಟ್ರಿ ಜತೆಗಿನ ಸಂವಾದದಲ್ಲಿ ಕೊಹ್ಲಿ ಹೀಗೊಂದು ಐಡಿಯಾ ಹೇಳಿದ್ದಾರೆ. ನನ್ನ ಪಾತ್ರವನ್ನು ನನ್ನ ಹೊರತಾಗಿ ಯಾರೂ ಮಾಡಲು ಸಾಧ್ಯವಿಲ್ಲ. ಹಾಗಾಗಿ ನನ್ನ ಜೀವನಗಾಥೆಯ ಸಿನಿಮಾದಲ್ಲಿ ನಾನೇ ನಾಯಕನಾಗಿರುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos