ಮುತ್ತಿಟ್ಟು ಲಿಪ್ಸ್ಟಿಕ್ ಒರೆಸಿದ ಪ್ರಿಯಾಂಕ

ಮುತ್ತಿಟ್ಟು ಲಿಪ್ಸ್ಟಿಕ್ ಒರೆಸಿದ ಪ್ರಿಯಾಂಕ

ವಾಷಿಂಗ್ಟನ್, ಜ. 7 : ಬಾಲಿವುಡ್ ಬ್ಯೂಟಿಫುಲ್ ಜೋಡಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಸ್ ಪರಸ್ಪರ ಲಿಪ್ಲಾಕ್ ಮಾಡಿಕೊಂಡಿದ್ದು, ಕೊನೆಯಲ್ಲಿ ಪ್ರಿಯಾಂಕ ಪತಿಯ ತುಟಿ ಒರೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇತ್ತೀಚೆಗೆ ಅಮೆರಿಕದಲ್ಲಿ ನಡೆದ 77 ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಿಯಾಂಕ ಮತ್ತು ನಿಕ್ ಜೋಡಿ ನಿರೂಪಕರು ಹೇಳಿದಂತೆ ಲಿಪ್ ಲಾಕ್ ಮಾಡಿದ್ದಾರೆ.

ಈ ವೇಳೆ ಪ್ರಿಯಾಂಕ ಹಾಕಿದ್ದ ರೆಡ್ ಕಲರ್ ಲಿಪ್ಸ್ಟಿಕ್ ನಿಕ್ ತುಟಿಗೆ ಅಂಟಿಕೊಂಡಿದ್ದು, ಇದನ್ನು ಸ್ವತಃ ಪ್ರಿಯಾಂಕ ಅವರೇ ಒರೆಸಿದ್ದಾರೆ.
77 ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಪಿಂಕ್ ಕಲರ್ ಗೌನ್ ತೊಟ್ಟು ಬಂದಿದ್ದ ಪ್ರಿಯಾಂಕ ಸಖತ್ ಸ್ಟೈಲಿಶ್ ಲುಕ್ನಲ್ಲಿ ಮಿಂಚುತ್ತಿದ್ದರು. ಜೊತೆಗೆ ಬಂದಿದ್ದ ಪತಿ ನಿಕ್ ಜೊನಸ್ ಕಪ್ಪು ಬಣ್ಣದ ಸೂಟ್ ಧರಿಸಿ ಬಂದಿದ್ದರು. 77 ನೇ ವಾರ್ಷಿಕ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಸ್ ಅತ್ಯುತ್ತಮ ಟಿವಿ ಸರಣಿ – ಸಂಗೀತ ಅಥವಾ ಹಾಸ್ಯ ಪ್ರಶಸ್ತಿಯನ್ನು ನೀಡಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos