ನಾವು ಬೆಳಗ್ಗೆ ಎದ್ದು ಮೇಕಪ್ ಹಾಕಿಕೊಳ್ಳುವುದೇ ನಿಮಗಾಗಿ: ಸುದೀಪ್

ನಾವು ಬೆಳಗ್ಗೆ ಎದ್ದು ಮೇಕಪ್ ಹಾಕಿಕೊಳ್ಳುವುದೇ ನಿಮಗಾಗಿ: ಸುದೀಪ್

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತನಟ ಅಭಿನವಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇಂದು ತಮ್ಮ 51ನೆಯ ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಇನ್ನು ಕಿಚ್ಚನ ಹುಟ್ಟುಹಬ್ಬದ ಸಂಭ್ರಮಕ್ಕೆ ಅಭಿಮಾನಿಗಳು ರಾಜ್ಯದ ವಿವಿಧ ಸ್ಥಳಗಳಿಂದ ಆಗಮಿಸಿ ನೆಚ್ಚಿನ ನಟನ ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ಹೌದು, ಇಂದು (ಸೋಮವಾರ ಸೆ. 02) ರಂದು ಖ್ಯಾತ ನಟ ‘ಕಿಚ್ಚ’ ಸುದೀಪ್ ಅವರಿಗೆ 51ನೇ ಹುಟ್ಟುಹಬ್ಬ. ಈ ಬಾರಿ ಹುಟ್ಟುಹಬ್ಬವನ್ನು ಜಯನಗರದ ಎಂಇಎಸ್ ಮೈದಾನದಲ್ಲಿ ನಡೆಸಿದರು.

ಈ ವೇಳೆ ಅಭಿಮಾನಿಗಳ ಬಗ್ಗೆ ಮಾತನಾಡಿರುವ ಕಿಚ್ಚ, ನಾನಿಂದು ತಲೆ ಎತ್ತಿ ಓಡಾಡುತ್ತಿದ್ದೇನೆ ಎಂದರೆ ಅದಕ್ಕೆ ಅಭಿಮಾನಿಗಳೇ ಕಾರಣ. ಸೆಪ್ಟೆಂಬರ್ 2ರಂದು ಎಲ್ಲರೂ ಬರುತ್ತಾರೆ. ಆದರೆ ಸೆ.1ರ ರಾತ್ರಿ 12 ಗಂಟೆಗೆ ಬರುವ ಕೂಗನ್ನು ಕೇಳಿದಾಗ, ನಮ್ಮನ್ನು ಇನ್ನಷ್ಟು ತಗ್ಗಿ-ಬಗ್ಗಿ ಇರುವಂತೆ ಮಾಡುತ್ತದೆ. ಇದನ್ನೂ ಓದಿ: ಅಭಿಮಾನಿಗಳಿಗೆ ಬರ್ತಡೇ ದಿನ ಮನೆ ಹತ್ತಿರ ಬರಬೇಡಿ ಎಂದಿದ್ಯಾಕೆ ಸುದೀಪ?

ನಾವು ಬೆಳಗ್ಗೆ ಎದ್ದು ಮೇಕಪ್ ಹಾಕಿಕೊಳ್ಳುವುದೇ ನಿಮಗಾಗಿ. ಲೈಫ್‌ನಲ್ಲಿ ಯಾರೂ ಕಾಂಪ್ರಮೈಸ್ ಆಗಬೇಡಿ. ಪ್ರೀತಿ ಹಾಗು ಒಳ್ಳೆತನ ತೋರಿಸುವುದಕ್ಕೂ ಕಾಂಪ್ರಮೈಸ್ ಆಗಬೇಡಿ. ನನ್ನ ಫ್ಯಾನ್ಸ್ ನನಗೆ ಕಳಂಕ ತರುವ ಕೆಲಸ ಮಾಡೋದಿಲ್ಲ, ಹಾಗೇ ನಾನು ಕೂಡ ಅಭಿಮಾನಿಗಳಿಗೆ ಕಳಂಕ ತರುವ ಕೆಲಸ ಮಾಡಲ್ಲ, ಅಭಿಮಾನಿಗಳು ನಮ್ಮ ವ್ಯಕ್ತಿತ್ವದ ಪ್ರತಿಬಿಂಬ ಎಂದರು.

ನನ್ನ ಅಭಿಮಾನಿಗಳು ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಇದೇನೋ ಸರಿ, ಆದರೆ, ಅಭಿಮಾನಿಗಳು ನನ್ನಿಂದಲೇ ಒಳ್ಳೆ ಕೆಲಸ ಮಾಡುತ್ತಿದ್ದಾರೆ ಅಂದ್ರೆ ತಪ್ಪಾಗುತ್ತದೆ. ಕಾರಣ, ಅಭಿಮಾನಿಗಳು ನಮ್ಮ ಪ್ರತಿಬಿಂಬವೇ ಆಗಿದ್ದಾರೆ. ನಾವು ತಲೆ ಎತ್ತಿಕೊಂಡು ಓಡಾಡ್ತಿದ್ದೇವೆ ಅಂದ್ರೆ, ಅದು ಇವರಿಂದಲೇ ಅಂತಲೇ ಹೇಳಬಹುದು ಎಂದರು.

ಒಟ್ಟಿನಲ್ಲಿ ಇಂದು ಕಿಚ್ಚ ಸುದೀಪ್ ಅವರು ಅಭಿಮಾನಿಗಳ ಜೊತೆ ಭರ್ಜರಿ ಬರ್ತಡೇ ಸೆಲೆಬ್ರೇಶನ್ ಮಾಡಿಕೊಂಡಿದ್ದು ಅಭಿಮಾನಿಗಳು ಕಿಚ್ಚನ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos