ಕೇಂದ್ರೀಯ ವಿದ್ಯಾಲಯ ಪ್ರವೇಶ: ಪಾಲಕರಿಗೆ ಮಾಹಿತಿ

ಕೇಂದ್ರೀಯ ವಿದ್ಯಾಲಯ ಪ್ರವೇಶ: ಪಾಲಕರಿಗೆ ಮಾಹಿತಿ

ಬೆಂಗಳೂರು, ಏ. 3, ನ್ಯೂಸ್ ಎಕ್ಸ್ ಪ್ರೆಸ್: ದೇಶದಾದ್ಯಂತ ಕೇಂದ್ರೀಯ ವಿದ್ಯಾನಿಲಯದಲ್ಲಿ 2ನೇ ತರಗತಿ ಹಾಗೂ ಅದ್ರ ಮೇಲ್ಪಟ್ಟ ತರಗತಿಗಳಿಗೆ (11ನೇ ತರಗತಿ ಹೊರತುಪಡಿಸಿ) ಪ್ರವೇಶ ನೋಂದಣಿ ಪ್ರಕ್ರಿಯೆ ಶುರುವಾಗಿದೆ. ಒಂದನೇ ತರಗತಿ ಹೊರತುಪಡಿಸಿ 2ನೇ ತರಗತಿಯಿಂದ ಮೇಲ್ಪಟ್ಟ ತರಗತಿ ಪ್ರವೇಶಕ್ಕೆ ಆನ್ಲೈನ್ ನಲ್ಲಿ ನೋಂದಣಿ ಪ್ರಕ್ರಿಯೆ ಶುರುವಾಗಿದೆ. 2ನೇ ತರಗತಿ ಹಾಗೂ ಮೇಲ್ಪಟ್ಟ ತರಗತಿಗಳಲ್ಲಿ ಖಾಲಿಯಿರುವ ಸೀಟುಗಳಿಗೆ ಮಾತ್ರ ಪ್ರವೇಶ ನಡೆಯಲಿದೆ. 10ನೇ ತರಗತಿ ಫಲಿತಾಂಶ ಬಂದ ಮೇಲೆ 11ನೇ ತರಗತಿ ಪ್ರವೇಶ ನೋಂದಣಿ ಪ್ರಕ್ರಿಯೆ ಶುರುವಾಗಲಿದೆ. ಇಂದಿನಿಂದ ನೋಂದಣಿ ಪ್ರಕ್ರಿಯೆ ಶುರುವಾಗಲಿದ್ದು ಏಪ್ರಿಲ್ 9 ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ. ವಿದ್ಯಾರ್ಥಿಗಳ ಪಟ್ಟಿ ಏಪ್ರಿಲ್ 12,2019 ರಂದು ಬಿಡುಗಡೆಯಾಗಲಿದೆ. 2ನೇ ತರಗತಿ ಹಾಗೂ ಮೇಲ್ಪಟ್ಟ ತರಗತಿಗೆ ಎಡ್ಮಿಷನ್ ಏಪ್ರಿಲ್ 12ರಿಂದ 20ರವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಪಾಲಕರು ಕೇಂದ್ರೀಯ ವಿದ್ಯಾನಿಲಯವನ್ನು ಸಂಪರ್ಕಿಸಬೇಕು. ಇಲ್ಲವೆ kvsonlineadmission.in ನಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಫ್ರೆಶ್ ನ್ಯೂಸ್

Latest Posts

Featured Videos