ಬಿಬಿಎಂಪಿಯಿಂದ ಆಚರಿಸಲಾಯಿತು ಕೆಂಪೇಗೌಡ ಜಯಂತಿ

ಬಿಬಿಎಂಪಿಯಿಂದ ಆಚರಿಸಲಾಯಿತು ಕೆಂಪೇಗೌಡ ಜಯಂತಿ

ಬೆಂಗಳೂರು, ಸೆ. 4: ಬೆಳಿಗ್ಗೆಯಿಂದ ಅದ್ಧೂರಿಯಾಗಿ ನಡೆದ ಸಂಭ್ರಮಾಚರಣೆ. ಪಾಲಿಕೆಯಲ್ಲಿ ಮನೆ ಮಾಡಿದ ಸಂಭ್ರಮ. ಕಾರ್ಯಕ್ರಮದ ಅಂತಿಮ ಹಂತವಾಗಿ ಕೆಂಪೇಗೌಡ ಪ್ರಶಸ್ತಿ ಪ್ರದಾನ .ಬಿಬಿಎಂಪಿ  ಗಾಜಿನ ಮನೆಯಲ್ಲಿ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು.  ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 100 ಜನರಿಗೆ ಕೆಂಪೇಗೌಡ ಪ್ರಶಸ್ತಿ ನೀಡಲಾಯಿತು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಡಿಸಿಎಂ ಅಶ್ವಥ್ ನಾರಾಯಣ್, ಎಂ.ಎಲ್.ಸಿ ಶರವಣ,  ಮೇಯರ್ ಗಂಗಾಂಬಿಕೆ‌, ಪಾಲಿಕೆ ಆಡಳಿತ ಪಕ್ಷ, ವಿಪಕ್ಷ ನಾಯಕ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಭಾಗಿಯಾಗಿದ್ದರು.

ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಹಿನ್ನಲೆ

ಕನ್ನಡಸೇವೆಗಾಗಿ ಸಾಹಿತಿ ಚಂದ್ರಶೇಖರ ಪಾಟೀಲ್, ಚಲನಚಿತ್ರ ಕ್ಷೇತ್ರದಿಂದ ಡಾ.ಮುಖ್ಯಮಂತ್ರಿ ಚಂದ್ರು, ಹಿರಿಯ ಅಡ್ವೋಕೇಟ್ ಪ್ರೊ.ರವಿವರ್ಮಕುಮಾರ್.

ಸರ್ಕಾರಿ ಸೇವೆಯಲ್ಲಿ ಐಪಿಎಸ್ ಡಿ.ರೂಪಾ, ಮಾಧ್ಯಮ ಕ್ಷೇತ್ರದಲ್ಲಿ ಸುವರ್ಣ ನ್ಯೂಸ್ ಮೆಟ್ರೋ ಬ್ಯುರೋ‌ ಮುಖ್ಯಸ್ಥರಾದ ರಜನಿ ರಾವ್, ಕನ್ನಡದ ಪ್ರಭದ ಹಿರಿಯ ಕಲಾವಿದ ಸುಧಾಕರ್ ದರ್ಬೆ ಸೇರಿದಂತೆ ವಿವಿಧ ಕ್ಷೇತ್ರಗಳ 100 ಗಣ್ಯರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಲಾಯಿತು.

ಇದೇ ಮೊದಲ ಬಾರಿಗೆ 10 ಜನರಿಗೆ  ಕೆಂಪೇಗೌಡರ ಸೊಸೆ ಮಹಾತ್ಯಾಗಿ ಲಕ್ಷ್ಮಿದೇವಿ ಪ್ರಶಸ್ತಿ ಪ್ರಕಟ.

ಅಲ್ಲದೇ ಇದೇ ಪ್ರಥಮ ಬಾರಿಗೆ 5 ಸಂಸ್ಥೆಗಳಿಗೆ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ಪ್ರಶಸ್ತಿ ಪ್ರಕಟ.

ಲಕ್ಷ್ಮಿದೇವಿ ಪ್ರಶಸ್ತಿ ಪುರಸ್ಕೃತರಿಗೆ ತಲಾ 25 ಸಾವಿರ ನಗದು ನೀಡಿಕೆ. ಪ್ರತಿ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಹೆಸರಿನ ಪ್ರಶಸ್ತಿ ಪುರಸ್ಕೃತ ಸಂಘ- ಸಂಸ್ಥೆಗಳಿಗೆ ತಲಾ 5 ಲಕ್ಷ ರೂ. ಗೌರವಧನ, ಪ್ರಶಸ್ತಿ ಫಲಕ ನೀಡಲಾಗುತ್ತಿದೆ..

ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ ಹೇಳಿಕೆ

1537ರಲ್ಲಿ ಬೆಂದಕಾಳೂರನ್ನ ಬೆಂಗಳೂರು ಹೆಸರಿನಲ್ಲಿ ನಿರ್ಮಾಣಮಾಡಿ ವಿಶ್ವಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರೋ ನಗರ ನಮ್ಮ ಬೆಂಗಳೂರು. 7 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್ ಕಂಪನಿಗಳ ತವರೂರು. ನೀರಿನ ಮೂಲವಿಲ್ಲದ ಬೆಂಗಳೂರಿಗೆ ಕೆರೆಗಳ ನಿರ್ಮಾಣ ಮಾಡಿದರು. 482 ವರ್ಷಗಳ ಬಳಿಕವೂ ಅವರನ್ನ ಸ್ಮರಿಸುವ ಕೆಲಸ ಮಾಡಿದ್ದಾರೆ. ಬೆಂಗಳೂರು ಕೋಟೆ ನಿರ್ಮಾಣಕ್ಕಾಗಿ ಲಕ್ಷ್ಮೀದೇವಿ ತಮ್ಮನ್ನೇ ಅರ್ಪಿಸಿಕೊಂಡಿದ್ದಾರೆ. ಅವರ ಹೆಸರಲ್ಲಿ ಹತ್ತು ಮಹಿಳೆಯರಿಗೆ ಪ್ರಶಸ್ತಿ ನೀಡಲಾಗ್ತಿದೆ. ಶಿವಕುಮಾರ ಸ್ವಾಮಿಗಳ ನೆನಪಿನಲ್ಲಿ ಐದು ಸಂಘಸಂಸ್ಥೆಗಳಿಗೆ ತಲಾ ಐದು ಲಕ್ಷ. ಬೆಂಗಳೂರು ನಗರ ಅಭಿವೃದ್ಧಿಗೆ ಹಲವು ಯೋಜನೆ ರೂಪಿಸಲಾಗಿದೆ. ಮುಂಬೈ, ದೆಹಲಿ ನಂತರ ಬೆಂಗಳೂರು ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ. ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿದ್ದು, ಏರ್ ಪ್ಯೂರಿಫೈಯರ್ ಅಳವಡಿಸಲಾಗ್ತಿದೆ. ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಸಂಪೂರ್ಣ ನಿಷೇಧ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆ

ಕೆಂಪೇಗೌಡರು 500 ವರ್ಷಗಳ ಒಂದೊಂದು ಕೆಲಸ ಈಗಲೂ ಕಾಣಬಹುದು. ನಗರದಲ್ಲಿರೋ ಪೇಟೆಗಳು, ದೇವಸ್ಥಾನಗಳ ನಿರ್ಮಾಣ ನೋಡಬಹುದು. ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಬೆಳೆದಿದ್ದು, ಅವರನ್ನ ಸ್ಮರಿಸೋ ಕೆಲಸ ಮಾಡಬೇಕು. ಇರೋ‌ಕೆರೆಗಳು ನಮ್ಮನ್ನ ಉಳಿಸಿ ಎನ್ನುವಂತಾಗಿದೆ. ಐಟಿ, ಬಿಟಿ, ವಿಜ್ಞಾನ ನಗರ ಅನ್ನೋ ಹೆಸರು ಬಂದಿದೆ. ಇರೋ ಪರಿಸರವನ್ನ ಉಳಿಸಿ, ಬೆಳಡಸಿಕೊಂಡು ಹೋಗುವಂತಾಗಬೇಕು. ನಮ್ಮ ಕಸವನ್ನ ನಾವೇ ಪರಿಹರಿಸುವಂತಾಗಿ, ಸ್ವಚ್ಚತೆ ಕಾಪಾಡಬೇಕು. ಜನರಿಗೆ ಉತ್ತಮ ಆಡಳಿತ ನೀಡುವಂತಾಗಬೇಕು. ಬೆಂಗಳೂರಿನ ಮೂಲಕ ಭಾರತವನ್ನ ಗುರುತಿಸುವಂತ ಕೆಲಸ ಮಾಡಬೇಕು ಎಂದು ತಿಳಿಸಿದರು

ಸಿಎಂ ಬಿಎಸ್ವೈ ಹೇಳಿಕ

ನಾಡಿನ ಅಭಿವೃದ್ಧಿಗೆ ಶ್ರಮಿಸಿದವರನ್ನ ಗುರುತಿಸಿ  1537 ರಲ್ಲಿ ವಿಜಯನಗರ ಸಾಮ್ರಾಜ್ಯದವರು ಬೆಂಗಳೂರು ಕಟ್ಟಲು ಸಹಾಯ ಮಾಡಿದ್ರು. ಕುಲ ಕಸುಬಿನ ಆಧಾರದ ಮೇಲೆ 53 ಪೇಟೆಗಳನ್ನ ನಿರ್ಮಾಣ ಮಾಡಲುಕೆಂ, ಪೇಗೌಡರ ಕಾಲದಲ್ಲಿ ಕೋಟೆ ಕೊತ್ತಲು, ದೇವಸ್ಥಾನ ನಿರ್ಮಾಣ ಮಾಡಿದ್ರು.

ಕುಡಿಯಲು, ಕೃಷಿ ಚಟುವಟಿಕೆಗೆ ಮುನ್ನೂರಕ್ಕೂ ಹೆಚ್ಚು ಕೆರೆ, ಕಟ್ಟೆಗಳ ನಿರ್ಮಾಷ ಮಾಡಿದರು. ಇದೀಗ 800 ಚದರ ಕಿ.ಮೀ ಅಗಲ ಬೆಳೆದು ನಿಂತಿದೆ. ಕೆಂಪೇಗೌಡರ ಮ್ಯೂಸಿಯಮ್ ಇದ್ದು, ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣ ಮಾಡಲಾಗಿದೆ. ಕೆಂಪೇಗೌಡರ ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡುವುದು ನೂರು ಕೋಟಿ ರೂಪಾಯಿಯಲ್ಲಿ ಅಭಿವೃದ್ಧಿ ಕಾರ್ಯ. ಕೆಂಪೇಗೌಡ ಏರ್ ಪೋರ್ಟ್‌ನಲ್ಲಿ ಕೆಂಪೇಗೌಡರ ಸ್ಟ್ಯಾಚು ನಿರ್ಮಾಣ. ಇದಕ್ಕಾಗಿ ಡಿಸಿಎಂ ಅಶ್ವಥ್ ನಾರಾಯಣ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos