‘ಚೌರೀಶನ ಕಥೆಗಳು’ ಕಥಾಸಂಕಲನಕ್ಕೆ ರಾಷ್ಟ್ರ ಮಟ್ಟದ ಗೌರವ

‘ಚೌರೀಶನ ಕಥೆಗಳು’ ಕಥಾಸಂಕಲನಕ್ಕೆ ರಾಷ್ಟ್ರ ಮಟ್ಟದ ಗೌರವ

ಚಿಕ್ಕೋಡಿ, ಫೆ. 07: ಮಕ್ಕಳ ಪ್ರೇಮಿ ಲಕ್ಷ್ಮಣ ಬಾಬು ಚೌರಿ ಅವರು ಬರೆದಿರುವ ಒತ್ತಕ್ಷರವಿಲ್ಲದ ‘ಚೌರೀಶನ ಕಥೆಗಳು’ ಕಥಾಸಂಕಲನಕ್ಕೆ ರಾಷ್ಟ್ರ ಮಟ್ಟದ ಗೌರವ ದೊರೆತಿದೆ.

ಈ ಕಥಾಸಂಕಲನ ಒತ್ತಕ್ಷರವನ್ನು ಬಳಸದೆ, ಸಹಜ ಕನ್ನಡದಲ್ಲಿ ಪ್ರಕಟವಾಗಿರುವ ಮೊದಲ ಕನ್ನಡದ ಪುಸ್ತಕ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಪುಸ್ತಕವು ‘ಯೂನಿವರ್ಸಲ್ ಅಚೀವರ್ಸ್ ಬುಕ್ ಆಪ್ ರೆಕಾರ್ಡ್ಸ್’ ಮತ್ತು ‘ಫ್ಯೂಚರ್ ಕಲಾಂಸ್ ಬುಕ್ ಆಪ್ ರೆಕಾರ್ಡ್ಸ್’ಪ್ರಶಸ್ತಿಗಳಿಗೆ ಭಾಜನವಾಗಿದೆ. ಇತ್ತೀಚಿಗೆ ತಮಿಳುನಾಡಿನ ಮಧುರೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೌರಿ ಗುರುಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

62 ಪುಟಗಳ ‘ಚೌರೀಶನ ಕಥೆಗಳು’ 18 ಮಕ್ಕಳ ಕಥೆಗಳ ಗುಚ್ಛವಾಗಿದ್ದು, ಒಟ್ಟು ಪುಸ್ತಕದಲ್ಲಿ ಎಲ್ಲಿಯೂ ಯಾವ ಪದಕ್ಕೂ ಒತ್ತಕ್ಷರ ಬಳಸಿಲ್ಲ. ಕನ್ನಡ ಸಾರಸ್ವತ ಲೋಕದ ಮಟ್ಟಿಗೆ ಇದೊಂದು ವಿಶಿಷ್ಠ ಪ್ರಯೋಗವಾಗಿದೆ. “ಹಿಂದೆ ಬಿ.ಎಂ.ಶ್ರೀಕಂಠಯ್ಯನವರು ಒತ್ತಕ್ಷರ ಬಳಸದೆ ‘ಗಾಳಿಪಟ’ಎನ್ನುವ ಕವಿತೆಯೊಂದನ್ನು ಬರೆದಿದ್ದರು. ಇಂಥದೊಂದು ಪ್ರಯೋಗ ಕನ್ನಡದಲ್ಲಿ ನಡೆಯಬೇಕೆಂದು ಅವರು ಹೇಳಿದ್ದರು. ಅದನ್ನೇ ಪ್ರೇರಣೆಯಾಗಿಟ್ಟುಕೊಂಡು ಈ ಕಥಾಸಂಕಲನ ರಚಿಸಿದ್ದೇನೆ”, ಎಂದು ಲಕ್ಷ್ಮಣ ಚೌರಿ ಅವರು ನ್ಯೂಸ್ ಎಕ್ಸ್ಪ್ರೆಸ್ ವರದಿಗಾರರೊಂದಿಗೆ ತಮ್ಮ ಮನದಾಳದ ಮಾತುಗಳನು ತಿಳಿಸಿದರು.

ರಾಯಬಾಗ ತಾಲೂಕು ಕುಡಚಿಯ ಅಜೀತ ಬಾನೆ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯಾಧ್ಯಾಪಕರಾಗಿವ ಚೌರಿ ಗುರುಗಳು, ಕಳೆದ 34 ವರ್ಷಗಳಿಂದ ಈ ಅನುದಾನಿತ ಖಾಸಗಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತಿ ಎಂದೇ ಗುರುತಿಸಿಕೊಂಡಿರುವ ಚೌರಿ ಅವರ ಮಕ್ಕಳಿಗಾಗಗಿಯೇ ಬರೆದ ನಾಲ್ಕು ಕವನ ಸಂಕಲನಗಳು ಈ ಮೊದಲು ಪ್ರಕಟಗೊಂಡಿವೆ.

ಫ್ರೆಶ್ ನ್ಯೂಸ್

Latest Posts

Featured Videos