ಕಾಟೇರನಿಗೆ ಮತ್ತೆ ಜೈಲೇ ಗತಿ

ಕಾಟೇರನಿಗೆ ಮತ್ತೆ ಜೈಲೇ ಗತಿ

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ ಮೂರು ತಿಂಗಳಿಂದ ಜೈಲು ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರು ಹೇಗಾದರೂ ಮಾಡಿ ಜೈಲಿನಿಂದ ಆಚೆ ಬರಲು ಪರದಾಡುತ್ತಿದ್ದಾರೆ.

ಆದರೆ ನಟ ದರ್ಶನ್ ಅವರಿಗೆ ಮಾತ್ರ ಜಾಮೀನು ಸಿಗುತ್ತಿಲ್ಲ. ಮತ್ತೆ ಇದೀಗ ದರ್ಶನ್ ಅವರಿಗೆ ಜೈಲು ಸೇರೆ ವಾಸವೇ ಮುಂದುವರೆದಿದೆ.

ಹೌದು, ಪತ್ನಿ ವಿಜಯಲಕ್ಷ್ಮಿ ಹೇಗಾದರು ಮಾಡಿ ಗಂಡನನ್ನು ಹೊರ ತರಬೇಕು ಎಂದು ಪ್ರಯತ್ನಿಸ್ತಿದ್ದಾರೆ. ಆದರೆ ಅಭಿಮಾನಿಗಳ ಹರಕೆ, ವಿಜಯಲಕ್ಷ್ಮಿ ಪ್ರಯತ್ನ ಯಾವುದು ಕೈಗೂಡುತ್ತಿಲ್ಲ. ದರ್ಶನ್ ಗೆ ಮತ್ತೆ ನಿರಾಸೆಯಾಗಿದ್ದು ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಲಾಗಿದೆ. ಇದನ್ನೂ ಓದಿ: ಹೆಚ್‌ ಡಿಕೆ ಅವರಿಗೆ ಸಿಕ್ಕಿರುವ ಒಳ್ಳೇ ಅವಕಾಶ ಬಳಸಿಕೊಳ್ಳಲಿ: ಡಿಸಿಎಂ

ದರ್ಶನ್​ಗೆ ಇಂದು (ಸೆ.​ 30) ಬೇಲ್​ ಸಿಗಬಹುದು ಎಂದು ಆಪ್ತರು ನಿರೀಕ್ಷಿಸಿದ್ದರು. ಆದರೆ ಅವರ ಜಾಮೀನು ಅರ್ಜಿ ವಿಚಾರಣೆ ದಿನಾಂಕವನ್ನು ಮುಂದೂಡಲಾಗಿದೆ. ಅಕ್ಟೋಬರ್​ 4ರಂದು ಬೇಲ್​ ಅರ್ಜಿ ವಿಚಾರಣೆ ನಡೆಯಲಿದೆ. ವಾದ ಮಂಡನೆಗೆ ಕಾಲಾವಕಾಶ ಬೇಕು ಎಂದು ದರ್ಶನ್​ ಪರ ವಕೀಲರು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos