ಕರೆ ಮಾಡಿದರೆ ಹೆಣ್ಮಕ್ಕಳು ಸೇಫ್ ..!

ಕರೆ ಮಾಡಿದರೆ ಹೆಣ್ಮಕ್ಕಳು ಸೇಫ್ ..!

ಗದಗ,ಡಿ. 10 : ದೇಶದೆಲ್ಲೆಡೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಇಲಾಖೆಗಳು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇವು ಸಮರ್ಪಕವಾಗಿ ಜಾರಿಯಾದಾಗ ಮಾತ್ರ ಅತ್ಯಾಚಾರ ಪ್ರಕರಣಗಳಂಥ ಹೇಯ ಕೃತ್ಯಗಳಿಗೆ ಕಡಿವಾಣ ಬೀಳಲು ಸಾಧ್ಯ. ಇದರ ಮಧ್ಯೆ ಗದಗ ಪೊಲೀಸ್ ವರಿಷ್ಠಾಧಿಕಾರಿ ಹೊಸದೊಂದು ಐಡಿಯಾ ಮಾಡಿದ್ದಾರೆ. ಈ ಐಡಿಯಾ ಏನಾದ್ರೂ ಪರಿಪೂರ್ಣವಾಗಿ ಕ್ಲಿಕ್ ಆದರೆ ಹೆಣ್ಣುಮಗಳೊಬ್ಬರು ಮಧ್ಯರಾತ್ರಿ ಸ್ವತಂತ್ರವಾಗಿ ಹೊರಗಡೆ ಬರುವ ಧೈರ್ಯ ತೋರೋದಂತು ಗ್ಯಾರಂಟಿ.

ಒಂದು ಹೆಣ್ಣು ಮಧ್ಯರಾತ್ರಿ ಸ್ವತಂತ್ರವಾಗಿ ಓಡಾಡುವ ಹಾಗಾದಾಗ ಮಾತ್ರ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಹಾಗೆ ಅಂತ ಮಹಾತ್ಮ ಗಾಂಧೀಜಿ ಕನಸು ಕಂಡಿದ್ರು. ಆದರೆ ವಿಪರ್ಯಾಸ ಅಂದ್ರೆ ಹಗಲಿನಲ್ಲಿಯೇ ನಮ್ಮ ಹೆಣ್ಣುಮಕ್ಕಳು ಹೊರಬರೋಕೆ ಭಯ ಪಡುವಂಥಾ ಕೆಟ್ಟ ಪರಿಸ್ಥಿತಿ ಸದ್ಯ ದೇಶದಲ್ಲಿ ನಿರ್ಮಾಣವಾಗಿದೆ. ಹೌದು..ಇದಕ್ಕೆ ಸಾಕ್ಷಿ ಎನ್ನುವಂತೆ ದೆಹಲಿ ನಿರ್ಭಯಾ ಪ್ರಕರಣ ಹಾಗೂ ಹೈದರಾಬಾದ್ ನ ಪಶು ವೈದ್ಯೆ ದಿಶಾ ಪ್ರಕರಣ ನಮ್ಮ ಮುಂದಿದೆ. ಒಂದಿಲ್ಲೊಂದು ರೀತಿಯಲ್ಲಿ ಕಾಮಪಿಶಾಚಿಗಳು ಹೆಣ್ಣಿನ ಮೇಲೆ ತಮ್ಮ ದುಷ್ಕೃತ್ಯವನ್ನು ಮೆರೆಯುತ್ತಿದ್ದಾರೆ.

ಹೀಗಾಗಿ ಸದ್ಯ ಪೊಲೀಸ್ ಇಲಾಖೆ ತನ್ನ ಜವಾಬ್ದಾರಿ ಹೆಚ್ಚಿಸಿಕೊಂಡಿದ್ದು ಹೆಣ್ಣುಮಕ್ಕಳ ರಕ್ಷಣೆಗೆ ಹಲವು ನೂತನ ಕ್ರಮಗಳ ಅನುಷ್ಠಾನಕ್ಕೆ ಮುಂದಾಗಿದೆ. ಗದಗ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಷಿ ನೇತೃತ್ವದ ತಂಡ ಜಿಲ್ಲೆಯಲ್ಲಿನ ಹೆಣ್ಣುಮಕ್ಕಳು ರಾತ್ರಿ ವೇಳೆ ಯಾವುದೇ ಅಪಾಯವಿಲ್ಲದಂತೆ ಸುರಕ್ಷಿತವಾಗಿ ಮನೆ ಮುಟ್ಟಿಸುವ ಮಹತ್ತರ ಜವಾಬ್ದಾರಿಯ ನಿರ್ಧಾರವನ್ನು ತೆಗೆದುಕೊಂಡಿದ್ದು ಅದನ್ನು ಯಶಸ್ವಿಯಾಗಿ ಜಾರಿ ಮಾಡಲು ಮುಂದಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos