ಕಂಬಳ ವಿರುದ್ಧ ಮತ್ತೆ ಧ್ವನಿ ಎತ್ತಿದ ಪೆಟಾ..!

ಕಂಬಳ ವಿರುದ್ಧ ಮತ್ತೆ ಧ್ವನಿ ಎತ್ತಿದ ಪೆಟಾ..!

ಉಡುಪಿ, ಅ.22 : ತುಳುನಾಡಿನ ಪ್ರಸಿದ್ಧ ಕಂಬಳ ಮತ್ತೊಮ್ಮೆ ಆಚರಣೆಗೆ ಬಂದಿದ್ದು, ಕೆಲವು ವಾರಗಳ ಹಿಂದಷ್ಟೇ ಮಂಗಳೂರಿನ ವಿವಿಧ ಕಡೆ ನಡೆಯುವ ಕಂಬಳದ ದಿನಾಂಕ, ಸ್ಥಳ ಸೇರಿ ವೇಳಾ ಪಟ್ಟಿ ಪ್ರಕಟವಾಗಿತ್ತು. ಆಚರಣೆಗಳ ಹೆಸರಲ್ಲಿ ಅಥವಾ ಇನ್ಯಾವುದೇ ರೀತಿಯಲ್ಲಿ ಪ್ರಾಣಿಗಳನ್ನು ಹಿಂಸಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದರೂ, ಉಡುಪಿಯ ಬರದಿ ಬೀಡು ಕಂಬಳದಲ್ಲಿ ಕೋಣಗಳನ್ನು ಓಡಿಸಿರುವ ಬಗ್ಗೆ ಪೆಟಾ ಇದೀಗ ಆಕ್ರೋಶ ವ್ಯಕ್ತಪಡಿಸಿದೆ.
ತುಳು ನಾಡಿನ ವಿಶಿಷ್ಟ ಸಂಸ್ಕೃತಿಯಾದ ಕಂಬಳವನ್ನು ವಿರೋಧಿಸಿದ ಇದೀಗ ಸದ್ದು ಮಾಡುತ್ತಿದೆ. ಪ್ರಾಣಿ ದಯಾ ಸಂಘ (ಪೆಟಾ) ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧ.. ಹೈ ಕೋರ್ಟ್ ಕಂಬಳವನ್ನು ಆಚರಿಸಲು ವಿರೋಧ ವ್ಯಕ್ತಪಡಿಸಿದರೂ, ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಕಳೆದೆರಡು ವರ್ಷಗಳಿಂದ ನಿರ್ವಿಘ್ನವಾಗಿ ನಡೆಯುತ್ತಿದ್ದ ಈ ಜಾನಪದ ಆಚರಣೆಗೆ ಈ ವರ್ಷ ಮತ್ತೆ ಕರಿ ನೆರಳು ಬೀಳುವ ಸೂಚನೆ ಕಾಣುತ್ತಿದೆ.

1960ರ ಪ್ರಾಣಿ ಹಿಂಸೆ ತಡೆ ಕಾಯಿದೆ ಪ್ರಕಾರ ಪ್ರಾಣಿಯನ್ನು ಹಿಂಸಿಸುವುದು ನಿಷೇಧಿಸಲಾಗಿದ್ದು, ಯಾವುದೇ ರೀತಿಯಲ್ಲಿ ಪ್ರಾಣಿಗಳಿಗೆ ನೋವು ಮಾಡುವುದನ್ನು ಕಾಯಿದೆ ವಿರೋಧಿಸುತ್ತದೆ. ಪ್ರಾಣಿಗಳನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳಬೇಕೆಂಬ ನಿಯಮವಿದೆ….

ಫ್ರೆಶ್ ನ್ಯೂಸ್

Latest Posts

Featured Videos